ಮಹಿಳಾ ಐಪಿಎಲ್: ಅಹಮದಾಬಾದ್ ತಂಡ ಅದಾನಿ ಪಾಲು, ಬಿಸಿಸಿಐಗೆ 4669 ಕೋಟಿ ರೂ. ಆದಾಯ
ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮಹಿಳಾ ಐಪಿಎಲ್ ಅನ್ನು ಆರಂಭಿಸುತ್ತಿದ್ದು, ಬುಧವಾರ ಚೊಚ್ಚಲ ಆವೃತ್ತಿಯ ಐದು ತಂಡಗಳು ಮಾರಾಟವಾಗಿವೆ.
Published: 25th January 2023 06:53 PM | Last Updated: 25th January 2023 06:53 PM | A+A A-

ಮಹಿಳಾ ಐಪಿಎಲ್
ಮುಂಬೈ: ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮಹಿಳಾ ಐಪಿಎಲ್ ಅನ್ನು ಆರಂಭಿಸುತ್ತಿದ್ದು, ಬುಧವಾರ ಚೊಚ್ಚಲ ಆವೃತ್ತಿಯ ಐದು ತಂಡಗಳು ಮಾರಾಟವಾಗಿವೆ. ಈ ಹರಾಜಿನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೋಬ್ಬರಿ 4669.99 ಕೋಟಿ ರೂಪಾಯಿ ಆದಾಯ ಗಳಿಸಿದೆ.
1289 ಕೋಟಿ ರೂಪಾಯಿಗೆ ಅಹಮದಾಬಾದ್ ತಂಡ ಖರೀದಿಸಿದ ಅದಾನಿ ಸ್ಪೋರ್ಟ್ಸ್‌ಲೈನ್ ಹರಾಜಿನಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ಇದನ್ನು ಓದಿ: Womens IPL: ಭಾರಿ ಮೊತ್ತಕ್ಕೆ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು ತನ್ನದಾಗಿಸಿಕೊಂಡ ವಯಕಾಮ್ 18!
ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ಡೆಲ್ಲಿ ಹಾಗೂ ಲಕ್ನೋ ತಂಡಗಳು ಕಣಕ್ಕಿಳಿಯಲಿವೆ.
ಉಳಿದ ಫ್ರಾಂಚೈಸಿಯು 1000 ಕೋಟಿಗಿಂತ ಅಧಿಕ ಬಿಡ್ ಮಾಡಲಿಲ್ಲ. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಜೆಎಸ್‍ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ ಫ್ರಾಂಚೈಸಿಯನ್ನು ಪಡೆದುಕೊಂಡಿದೆ.