ಮೊದಲ ಟಿ20 ಪಂದ್ಯ: ನ್ಯೂಜಿಲ್ಯಾಂಡ್ ಅಬ್ಬರದ ಬ್ಯಾಟಿಂಗ್, ಟೀಂ ಇಂಡಿಯಾಗೆ 177 ರನ್ ಗುರಿ!
ಆತಿಥೇಯ ನ್ಯೂಜಿಲ್ಯಾಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ ಮನ್ ಗಳು ಅಬ್ಬರದ ಬ್ಯಾಟಿಂಗ್ ಮಾಡಿದ್ದು ಟೀಂ ಇಂಡಿಯಾಗೆ 177 ರನ್ ಗಳ ಗುರಿ ನೀಡಿದೆ.
Published: 27th January 2023 08:54 PM | Last Updated: 27th January 2023 08:54 PM | A+A A-

ಟೀಂ ಇಂಡಿಯಾ ಆಟಗಾರರು
ರಾಂಚಿ: ಆತಿಥೇಯ ನ್ಯೂಜಿಲ್ಯಾಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ ಮನ್ ಗಳು ಅಬ್ಬರದ ಬ್ಯಾಟಿಂಗ್ ಮಾಡಿದ್ದು ಟೀಂ ಇಂಡಿಯಾಗೆ 177 ರನ್ ಗಳ ಗುರಿ ನೀಡಿದೆ.
ರಾಂಚಿಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿದ್ದು ಭಾರತಕ್ಕೆ 177 ರನ್ ಗಳ ಗುರಿ ನೀಡಿದೆ.
ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 35, ಡೆವೊನ್ ಕಾನ್ವೇ 52, ಗ್ಲೇನ್ ಪಿಲಿಪ್ಸ್ 17 ರನ್ ಪೇರಿಸಿದ್ದರೆ ಡೇರಿಲ್ ಮಿಚೆಲ್ ಅಜೇಯ 59 ರನ್ ಬಾರಿಸಿದ್ದಾರೆ.
ಭಾರತ ಪರ ಬೌಲಿಂಗ್ ನಲ್ಲಿ ವಾಷಿಂಗ್ಟನ್ ಸುಂದರ್ 2, ಅರ್ಷ್ ದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.