ಭಾರತ ಎ ತಂಡವನ್ನು ಮಣಿಸಿ ಉದಯೋನ್ಮುಖ ಏಷ್ಯಾ ಕಪ್ 2023 ಪ್ರಶಸ್ತಿ ಗೆದ್ದ ಪಾಕಿಸ್ತಾನ ಎ!

ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023ರ ಫೈನಲ್‌ನಲ್ಲಿ ಪಾಕಿಸ್ತಾನ ಎ ತಂಡವು ಭಾರತ ಎ ತಂಡವನ್ನು 128 ರನ್‌ಗಳಿಂದ ಸೋಲಿಸಿದೆ. 
ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ

ಕೊಲಂಬೋ: ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023ರ ಫೈನಲ್‌ನಲ್ಲಿ ಪಾಕಿಸ್ತಾನ ಎ ತಂಡವು ಭಾರತ ಎ ತಂಡವನ್ನು 128 ರನ್‌ಗಳಿಂದ ಸೋಲಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಎ ತಂಡ ಭಾರತ ತಂಡಕ್ಕೆ 353 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 224 ರನ್‌ಗಳಿಗೆ ಸೋಲು ಕಂಡಿತು. ಭಾರತದ ಪರ ಅಭಿಷೇಕ್ ಶರ್ಮಾ ಗರಿಷ್ಠ 61 ರನ್ ಗಳಿಸಿದರು. ಅಭಿಷೇಕ್ ಬಿಟ್ಟರೆ ಭಾರತದ ಯಾವುದೇ ಆಟಗಾರ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಪರ ಟೈಬ್ ತಾಹಿರ್ ಶತಕ ಬಾರಿಸಿದರು.

ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಸಾಯಿ ಸುದರ್ಶನ್ ಮತ್ತು ಅಭಿಷೇಕ್ ಓಪನಿಂಗ್ ನೀಡಿದರು. ಸುದರ್ಶನ್ 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಅಭಿಷೇಕ್ ಅರ್ಧಶತಕ ಗಳಿಸಿದರು. 51 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ನಿಕಿನ್ ಜೋಸ್ 11 ರನ್ ಗಳಿಸಿದರು. ನಾಯಕ ಯಶ್ ಧುಲ್ 4 ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿದರು. ನಿಶಾಂತ್ ಸಿಂಧು 9 ರನ್ ಗಳಿಸಿ ಔಟಾದರು. ರಿಯಾನ್ ಪರಾಗ್ 14 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಹರ್ಷಿತ್ ರಾಣಾ 13 ರನ್ ಕೊಡುಗೆ ನೀಡಿದರು. ರಾಜ್ಯವರ್ಧನ್ 11 ರನ್ ಗಳಿಸಿ ಔಟಾದರು. ಮಾನವ್ ಸುತಾರ್ 7 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಾಕ್ ಪರ ಸುಫಿಯಾನ್ ಮುಕಿಮ್ 10 ಓವರ್‌ಗಳಲ್ಲಿ 66 ರನ್ ನೀಡಿ 3 ವಿಕೆಟ್ ಪಡೆದರು. ಅರ್ಷದ್ ಇಕ್ಬಾಲ್ 7 ಓವರ್ ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಮೆಹ್ರಾನ್ ಮುಮ್ತಾಜ್ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ ಎರಡು ವಿಕೆಟ್ ಪಡೆದರು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ತಂಡದ ಪರ ಟೈಬ್ ತಾಹಿರ್ ಶತಕ ಗಳಿಸಿದರು. ಅವರು 71 ಎಸೆತಗಳಲ್ಲಿ 108 ರನ್ ಗಳಿಸಿದರು. ತಾಹಿರ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ 62 ಎಸೆತಗಳಲ್ಲಿ 65 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅಯೂಬ್ 51 ಎಸೆತಗಳಲ್ಲಿ 59 ರನ್ ಗಳಿಸಿದರು. ಉಮರ್ ಯೂಸುಫ್ 35 ರನ್ ಕೊಡುಗೆ ನೀಡಿದರು. ಮುಬಾಸಿರ್ ಖಾನ್ 47 ಎಸೆತಗಳಲ್ಲಿ 35 ರನ್ ಗಳಿಸಿದರು. ಮೊಹಮ್ಮದ್ ವಾಸಿಂ ಜೂನಿಯರ್ 17 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತ ಎ ಪರ ಬೌಲಿಂಗ್ ಮಾಡುತ್ತಿದ್ದ ರಿಯಾನ್ ಪರಾಗ್ 4 ಓವರ್ ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ರಾಜ್ಯವರ್ಧನ್ 6 ಓವರ್ ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ 6 ಓವರ್ ಗಳಲ್ಲಿ 51 ರನ್ ನೀಡಿ ಒಂದು ವಿಕೆಟ್ ಪಡೆದರು. ಮಾನವ್ ಸುತಾರ್ ಮತ್ತು ನಿಶಾಂತ್ ಸಿಂಧು ತಲಾ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com