3ನೇ ಟೆಸ್ಟ್: ಭಾರತಕ್ಕೆ ಮುಳುವಾದ ಕಳಪೆ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 9 ವಿಕೆಟ್ ಗಳ ಭರ್ಜರಿ ಜಯ
ನಿರೀಕ್ಷೆಯಂತೆಯೇ ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ಎದುರು 9 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
Published: 03rd March 2023 11:14 AM | Last Updated: 03rd March 2023 11:14 AM | A+A A-

ಆಸಿಸ್ ಗೆಲುವು
ಇಂದೋರ್: ನಿರೀಕ್ಷೆಯಂತೆಯೇ ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ಎದುರು 9 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಗೆ ಭಾರತ 76 ರನ್‌ಗಳ ಗುರಿ ನೀಡಿತ್ತು.. ಇಂದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 1 ವಿಕೆಟ್ ಕಳೆದುಕೊಂಡು ಗುರಿಯನ್ನು ಸಾಧಿಸಿ 9 ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 49 ಮತ್ತು ಲಬುಶೆನ್ 28 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ: 3ನೇ ಟೆಸ್ಟ್: ಬ್ಯಾಟ್ಸ್ ಮನ್ ಗಳ ವೈಫಲ್ಯ, ಸೋಲಿನ ಸುಳಿಯಲ್ಲಿ ಭಾರತ; ಆಸ್ಟ್ರೇಲಿಯಾಗೆ 76 ರನ್ ಗುರಿ!
ಮೂರನೇ ದಿನದಲ್ಲಿ ಖವಾಜಾ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಮೊದಲ ಮುನ್ನಡೆ ಪಡೆದರು, ಆದರೆ ನಂತರ ಭಾರತೀಯ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸಿಸ್ ಪಡೆ 9 ವಿಕೆಟ್ ಗಳ ಅಂತರದಲ್ಲಿ ನಿಗದಿತ ಗುರಿ ತಲುಪಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
#WTC23 Final bound
— ICC (@ICC) March 3, 2023
Congratulations Australia. See you in June! pic.twitter.com/H2YdaWPzYV
ಇದಕ್ಕೂ ಮುನ್ನ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 163 ರನ್ ಗಳಿಸಲಷ್ಟೇ ಶಕ್ತವಾಗಿ ಆಸ್ಟ್ರೇಲಿಯಾಕ್ಕೆ 76 ರನ್‌ಗಳ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ಪರ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 64 ರನ್ ನೀಡಿ 8 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತದ ಪರ ಚೇತೇಶ್ವರ ಪೂಜಾರ 59 ರನ್‌ಗಳ ಇನಿಂಗ್ಸ್ ಆಡಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 109 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 197 ರನ್ ಗಳಿಸಿ 88 ರನ್ ಮುನ್ನಡೆ ಸಾಧಿಸಿತು.