4ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 480 ರನ್ ಗಳಿಗೆ ಆಲೌಟ್
ಬಾರ್ಡರ್-ಗವಾಸ್ಕರ್ ಟ್ರೋಫಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 480 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
Published: 10th March 2023 04:48 PM | Last Updated: 10th March 2023 08:27 PM | A+A A-

ಆಸ್ಟ್ರೇಲಿಯಾ ಆಲೌಟ್
ಅಹ್ಮದಾಬಾದ್: ಬಾರ್ಡರ್-ಗವಾಸ್ಕರ್ ಟ್ರೋಫಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 480 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಪಂದ್ಯದ ಎರಡನೇ ದಿನದಾಟದಲ್ಲಿ ಉಸ್ಮಾನ್ ಖವಾಜಾ (180) ಹಾಗೂ ಕ್ಯಾಮರೂನ್ ಗ್ರೀನ್ (114) ಶತಕಗಳ ನೆರವಿನಿಂದ 167.2 ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 480 ರನ್‌ಗಳಿಗೆ ಆಲೌಟ್ ಆಗಿದೆ. 5ನೇ ವಿಕೆಟ್‌ಗೆ 208 ರನ್‌ಗಳ ಜೊತೆಯಾಟ ಕಟ್ಟಿದ ಖ್ವಾಜಾ ಹಾಗೂ ಗ್ರೀನ್ ಭಾರತೀಯ ಬೌಲರ್‌ಗಳನ್ನು ಕಾಡಿದರು. ಐದನೇ ವಿಕೆಟ್‌ಗೆ 208 ರನ್‌ಗಳ ಜೊತೆಯಾಟ ಕಟ್ಟಿದ ಖವಾಜಾ ಹಾಗೂ ಗ್ರೀನ್ ಭಾರತೀಯ ಬೌಲರ್‌ಗಳನ್ನು ಕಾಡಿದರು.
Innings Break!
Australia are all out for 480 runs.@ashwinravi99 picks up six wickets
Scorecard - https://t.co/8DPghkwsO6 #INDvAUS @mastercardindia pic.twitter.com/q8AgX4wwK2— BCCI (@BCCI) March 10, 2023
ಖವಾಜಾ ಕೇವಲ 20 ರನ್ ಅಂತರದಲ್ಲಿ ದ್ವಿಶತಕ ವಂಚಿತರಾದರು. 422 ಎಸೆತಗಳನ್ನು ಎದುರಿಸಿದ ಅವರು 21 ಬೌಂಡರಿಗಳ ನೆರವಿನಿಂದ 180 ರನ್ ಗಳಿಸಿದರು. ಮತ್ತೊಂಡೆದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ ದಾಖಲಿಸಿದರು. 170 ಎಸೆತಗಳನ್ನು ಎದುರಿಸಿದ ಗ್ರೀನ್ 114 ರನ್ (18 ಬೌಂಡರಿ) ಗಳಿಸಿ ಔಟ್ ಆದರು. ಟಾಡ್ ಮರ್ಫಿ ಮತ್ತು ನೇಥನ್ ಲಯನ್ ಒಂಬತ್ತನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಗಾಯದ ಮೇಲೆ ಬರೆ ಎಳೆದರು. 61 ಎಸೆತಗಳನ್ನು ಎದುರಿಸಿದ ಮರ್ಫಿ 41 ರನ್ (5 ಬೌಂಡರಿ) ಗಳಿಸಿದರು. ನೇಥನ್ ಲಯನ್ 34 ರನ್ ಗಳಿಸಿದರು.
ಭಾರತದ ಪರ ಅಶ್ವಿನ್ ಆರು ಮತ್ತು ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸಿದರು.