ಡಬ್ಲ್ಯುಪಿಎಲ್ 2023: ಆರ್ ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಗೆ 10 ವಿಕೆಟ್ ಗಳ ಭರ್ಜರಿ ಜಯ!

ಅಲಿಸ್ಸಾ ಹೀಲಿ ಅವರ ಸ್ಫೋಟಕ ಬ್ಯಾಟಿಂಗ್ (ಅಜೇಯ 96 ರನ್) ನೆರವಿನಿಂದ ಉತ್ತರ ಪ್ರದೇಶ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಆರ್ ಸಿಬಿ-ಉತ್ತರ ಪ್ರದೇಶ ವಾರಿಯರ್ಸ್ ನಡುವಿನ ಪಂದ್ಯ
ಆರ್ ಸಿಬಿ-ಉತ್ತರ ಪ್ರದೇಶ ವಾರಿಯರ್ಸ್ ನಡುವಿನ ಪಂದ್ಯ

ಮುಂಬೈ: ಅಲಿಸ್ಸಾ ಹೀಲಿ ಅವರ ಸ್ಫೋಟಕ ಬ್ಯಾಟಿಂಗ್ (ಅಜೇಯ 96 ರನ್) ನೆರವಿನಿಂದ ಉತ್ತರ ಪ್ರದೇಶ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
 
ಈ ಟೂರ್ನಮೆಂಟ್ ನಲ್ಲಿ ಆರ್ ಸಿಬಿಗೆ ಇದು ನಾಲ್ಕನೇ ಸತತ ಸೋಲಾಗಿದ್ದು, ಅಲಿಸ್ಸಾ ಹೀಲಿ, 18 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 47 ಎಸೆತಗಳಲ್ಲಿ 96 ರನ್ ಗಳಿಸಿದರು. 

ಟಾಸ್ ಗೆದ್ದ ಆರ್ ಸಿಬಿ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಸೋಫಿ ಡಿವೈನ್ ಅಬ್ಬರದ ಬ್ಯಾಟಿಂಗ್ ನಿಂದ ತಂಡಕ್ಕೆ ಬಲವಾದ ಆರಂಭ ಸಿಕ್ಕಿತು. ಆದರೆ, ಮಂಧಾನ ಕೇವಲ ನಾಲ್ಕು ರನ್‌ಗಳಿಗೆ ವಿಕೆಟ್ ಒಪ್ಪಿಸಿ ಬ್ಯಾಟಿಂಗ್ ನಲ್ಲಿ ಮತ್ತೊಮ್ಮೆ ವಿಫಲರಾದರು.

ನಂತರ ಎಲಿಸ್ ಪೆರ್ರಿ-ಡಿವೈನ್‌ 44 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಸೋಫಿ ಡಿವೈನ್ ನ್ನು ಪೆವಿಲಿಯನ್ ಗೆ ಕಳಿಸಿದ ಬಳಿಕ ಆರ್ ಸಿಬಿಯ ಉಳಿದ ಬ್ಯಾಟ್ಸ್ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. 19.3 ಓವರ್ ಗಳಲ್ಲಿ ಆರ್ ಸಿಬಿ 138 ರನ್ ಗಳಿಸಿ ಸರ್ವಪತನ ಕಂಡಿತು. 

ಯುಪಿ ಪರ ಎಕ್ಲೆಸ್ಟೋನ್ 13 ರನ್ ನೀಡಿ 4 ವಿಕೆಟ್ ಗಳಿಸಿ ಉತ್ತಮ ಬೌಲರ್ ಎನಿಸಿದರು. ಉತ್ತರ ಪ್ರದೇಶ ತಂಡ 13 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೇ 139 ರನ್ ಗಳಿಸಿ ಆರ್ ಸಿಬಿ ವಿರುದ್ಧ ಜಯಗಳಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com