2019 ವಿಶ್ವಕಪ್ ನಂತರ ನಾಲ್ಕು ವರ್ಷ ಕಳೆದರೂ ಪ್ರಶ್ನೆಯಾಗಿಯೇ ಉಳಿದ ಭಾರತದ ನಂ-4 ಕ್ರಮಾಂಕ!

2019 ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಇಂಗ್ಲೆಂಡ್  ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಗಾಯಾಳು ಶಿಖರ್ ಧವನ್ ಬದಲಿಗೆ ರಿಷಭ್ ಪಂತ್  ಭಾರತದ ನಂಬರ್-4 ಕ್ರಮಾಂಕದಲ್ಲಿ ಆಡುವರೇ ಎಂದು ವರದಿಗಾರರೊಬ್ಬರು ರೋಹಿತ್ ಶರ್ಮಾ ಅವರನ್ನು ಕೇಳಿದ್ದರು.  
ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್
ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್

ಚೆನ್ನೈ: 2019 ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಇಂಗ್ಲೆಂಡ್  ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಗಾಯಾಳು ಶಿಖರ್ ಧವನ್ ಬದಲಿಗೆ ರಿಷಭ್ ಪಂತ್  ಭಾರತದ ನಂಬರ್-4 ಕ್ರಮಾಂಕದಲ್ಲಿ ಆಡುವರೇ ಎಂದು ವರದಿಗಾರರೊಬ್ಬರು ರೋಹಿತ್ ಶರ್ಮಾ ಅವರನ್ನು ಕೇಳಿದ್ದರು.  

ಅಂದು ಉಪನಾಯಕರಾಗಿದ್ದ ರೋಹಿತ್ ಶರ್ಮಾ, ಎಲ್ಲರೂ ರಿಷತ್ ಪಂತ್ ನಂಬರ್-4 ಕ್ರಮಾಂಕದಲ್ಲಿ ಆಡುವುದು ಸೂಕ್ತ ಅಂತಿದ್ದಾರೆ ಎಂದು ಹೇಳಿದರು. ರಿಷಭ್ ಪಂತ್  ಏಲ್ಲಿ? ಎಂದು ಕೇಳಿದರೆ ಅವರು ನಂಬರ್ 4 ಕ್ರಮಾಂಕದಲ್ಲಿದ್ದಾರೆ ಅಂತಾ ಉತ್ತರಿಸಿದ್ದರು. ಇದು ಮುಗಿದು ನಾಲ್ಕು ವರ್ಷ ಕಳೆದರೂ ಆ ಪ್ರಶ್ನೆ ಇನ್ನೂ ಪ್ರಸ್ತುತವಾಗಿದೆ. ಈ ಬಾರಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕರಾಗಿದ್ದರು ಮತ್ತೊಂದು ವಿಶ್ವಕಪ್ ಗೆ ತಂಡವನ್ನು ಸಜ್ಜುಗೊಳಿಸುತ್ತಿದ್ದಾರೆ.

2019ರ ವಿಶ್ವಕಪ್ ನಂತರ ಎರಡು ವರ್ಷಗಳಲ್ಲಿ ಅಂಬಟಿ ರಾಯುಡು ಸೇರಿದಂತೆ ಅನೇಕ ಆಟಗಾರರು ನಂಬರ್ 4 ಕ್ರಮಾಂಕದಲ್ಲಿ ಆಡಿದ್ದಾರೆ. ಅಂಬಟಿ ರಾಯುಡು ಅತಿ ಹೆಚ್ಚು (15) ಪಂದ್ಯಗಳನ್ನಾಡಿದ್ದಾರೆ. ಆದಾಗ್ಯೂ, ರಾಯುಡು ಕೊನೆಯ ಕ್ಷಣದಲ್ಲಿ ತಂಡದಿಂದ ಹೊರಗುಳಿದಿದ್ದರಿಂದ ಶಂಕರ್ ಸ್ಥಾನ ಪಡೆದರು. ಧವನ್ ಗಾಯಗೊಂಡಾಗ  ಕೆಎಲ್ ರಾಹುಲ್ ನಂ. 4 ರಲ್ಲಿ ಆಡಲು ಶುರು ಮಾಡಿದರು.ರಿಷಭ್ ಪಂತ್ ಡ್ರಾಪ್ ಆದಾಗ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಬ್ಯಾಟರ್ ಗಳು ಆಗಮಿಸುತ್ತಿದ್ದರಿಂದ ನಂ-4 ಸ್ಥಾನ ಒಂದು ರೀತಿಯ ಸಂಕೀರ್ಣ ಸ್ಥಾನವಾಗಿ ಉಳಿಯಿತು.

2020 ಸೆಪ್ಟೆಂಬರ್ ನಿಂದ ಈ ಸ್ಥಾನದಲ್ಲಿ ಏಳು ಬ್ಯಾಟರ್ ಗಳು ಟೀಂ ಇಂಡಿಯಾ ಪರ ಆಡಿದ್ದಾರೆ. ಇದರಲ್ಲಿ ಶ್ರೇಯರ್ ಅಯ್ಯರ್ ಅತಿ ಹೆಚ್ಚು 13 ಪಂದ್ಯಗಳನ್ನಾಡಿದ್ದಾರೆ. ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಿಂತ ಮುನ್ನಾ ಇಶಾನ್ ಕಿಶಾನ್ ನಂಬರ್-4 ಸ್ಥಾನದಲ್ಲಿ ಆಡಲು ಪ್ರಯತ್ನಿಸಿದರು.

ವಿಶ್ವಕಪ್ ಗೂ ಮುನ್ನ ರೋಹಿತ್ ಶರ್ಮಾ ಮತ್ತು ಅಯ್ಯರ್ ಟೀಂ ಇಂಡಿಯಾ ಸೇರುವ ಸಾಧ್ಯತೆಯಿದೆ. ಹೀಗಾಗಿ ಬುಧವಾರ ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಅಕ್ಟೋಬರ್ ನಲ್ಲಿ ನಂಬರ್ 4 ಸ್ಥಾನಕ್ಕೆ ಯಾರು ಸೂಕ್ತ ಎಂಬುದನ್ನು ರೋಹಿತ್ ಶರ್ಮಾ ಮತ್ತು ಸಹೋದ್ಯೋಗಿಗಳು ನಿರ್ಧರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com