ಐಪಿಎಲ್ 2023: ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೆಕೆಆರ್ ಗೆ 5 ರನ್ ಗಳ ಭರ್ಜರಿ ಜಯ
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ 2023 ಆವೃತ್ತಿಯ 47ನೇ ಪಂದ್ಯದಲ್ಲಿ ರಿಂಕು ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ಅವರ ಅಮೋಘ ಪ್ರದರ್ಶನದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 5 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
Published: 05th May 2023 12:00 AM | Last Updated: 05th May 2023 12:02 AM | A+A A-

ಕೆಕೆಆರ್ ಆಟಗಾರರ ಸಂಭ್ರಮ
ಹೈದ್ರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ 2023 ಆವೃತ್ತಿಯ 47ನೇ ಪಂದ್ಯದಲ್ಲಿ ರಿಂಕು ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ಅವರ ಅಮೋಘ ಪ್ರದರ್ಶನದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 5 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೆಕೆಆರ್ ಪರ ಆರಂಭಿಕ ಆಟಗಾರರಾದ ಜಾಸನ್ ರಾಯ್ 20, ನಿತೀಶ್ ರಾಣಾ 42, ರಿಂಕು ಸಿಂಗ್ 46, ಆಂಡ್ರೆ ರಸ್ಸೆಲ್ 24, ಅನುಕುಲ್ ರಾಯ್ 13 ರನ್ ಗಳಿಸಿದರು.
ಸನ್ ರೈಸರ್ಸ್ ಹೈದ್ರಾಬಾದ್ ಪರ ಮಾರ್ಕೊ ಜಾನ್ಸನ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಅಡೆನ್ ಮಾರ್ಕಂ, ಮಾಯಾಂಕ್ ಮಾರ್ಕೆಂಡೆ ತಲಾ 1 ವಿಕೆಟ್ ಕಬಳಿಸಿದರು. ಕೆಕೆಆರ್ ನೀಡಿದ 172 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಲಷ್ಟೇ ಶಕ್ತವಾಯಿತು.
We believed. We fought. We won. pic.twitter.com/NKyEkiR0sg
— KolkataKnightRiders (@KKRiders) May 4, 2023
ಸನ್ ರೈಸರ್ಸ್ ಹೈದ್ರಾಬಾದ್ ಪರ ಅಭಿಷೇಖ್ ಶರ್ಮಾ 9, ಮಾಯಂಕ್ ಅಗರ್ ವಾಲ್ 20, ಮಾರ್ಕಂ 41, ಹೆನ್ರಿಚ್ ಕ್ಲಾಸೆನ್ 36 ರನ್, ಭುವನೇಶ್ವರ್ ಕುಮಾರ್ 5 ರನ್ ಗಳಿಸಿದರು. ಇದರಿಂದಾಗಿ ಕೆಕೆಆರ್ 5 ರನ್ ಗಳಿಂದ ರೋಚಕ ಗೆಲುವು ದಾಖಲಿಸಿತು. ಕೆಕೆಆರ್ ಪರ 4 ಓವರ್ ಗಳಲ್ಲಿ 20 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಗೆಲ್ಲಲು ಕಾರಣರಾದ ವರುಣ್ ಚಕ್ರವರ್ತಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.