ಹೈದ್ರಾಬಾದ್ ಗೆ ಹೋದ್ರೂ ಗಂಭೀರ್ ಗೆ ತಪ್ಪಿಲ್ಲ ಆರ್ ಸಿಬಿ ಅಭಿಮಾನಿಗಳ ಕಾಟ: ಮೈದಾನದಲ್ಲೇ ಕೊಹ್ಲಿ.. ಕೊಹ್ಲಿ ಕೂಗು!
ಹೈದರಾಬಾದ್: ಹೈದ್ರಾಬಾದ್ ನಲ್ಲೂ ಲಕ್ಮೋ ಮೆಂಟರ್ ಗೌತಮ್ ಗಂಭೀರ್ ಗೆ ಆರ್ ಸಿಬಿ ಅಭಿಮಾನಿಗಳ ಕಾಟ ತಪ್ಪಿಲ್ಲ.. ಮೈದಾನದಲ್ಲೇ ಕೊಹ್ಲಿ..ಕೊಹ್ಲಿ ಎಂದು ಕೂಗುವ ಮೂಲಕ ಗಂಭೀರ್ ಗೆ ಮುಜುಗರವನ್ನುಂಟು ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಮತ್ತೆ ಗೌತಮ್ ಗಂಭೀರ್ ಗೆ ಮುಜುಗರವನ್ನುಂಟು ಮಾಡುವ ಸನ್ನಿವೇಶ ಎದುರಾಗಿದ್ದು, ಪ್ರೇಕ್ಷಕರ ವರ್ತನೆ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಲಕ್ನೋ ತಂಡದ ಮೆಂಟರ್ ಗೆ ಗೌತಮ್ ಗಂಭೀರ್ ಗೆ ಮೈದಾನದಲ್ಲೇ ಕೆಲ ಆರ್ ಸಿಬಿ ಅಭಿಮಾನಿಗಳು ಕೊಹ್ಲಿ-ಕೊಹ್ಲಿ ಎಂದು ಕೂಗುವ ಮೂಲಕ ಮುಜುಗರವನ್ನುಂಟು ಮಾಡಿದ್ದಾರೆ. ಕೊಹ್ಲಿ ಗ್ಯಾಲರಿಯತ್ತ ಆಗಮಿಸುತ್ತಲೇ ಆರ್ ಸಿಬಿ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಿದ್ದರು,
ಈ ಹಿಂದೆ ಆರ್ ಸಿಬಿ vs ಲಕ್ನೋ ಪಂದ್ಯದ ವೇಳೆ ಕೊಹ್ಲಿ ಮತ್ತು ಗಂಭೀರ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ನವೀನ್ ಉಲ್ ಹಕ್ ವಿಚಾರವಾಗಿ ಏರ್ಪಟ್ಟಿದ್ದ ಈ ಸಂಘರ್ಷದಲ್ಲಿ ಮೂವರೂ ಆಟಗಾರರಿಗೆ ಬಿಸಿಸಿಐ ದಂಡ ವಿಧಿಸಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಗೆಲುವಿನ ಬಳಿಕ ಗಂಭೀರ್ ಆರ್ ಸಿಬಿ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಮಾಡಿದ್ದ ಸನ್ಹೆಗಳು ಆರ್ ಸಿಬಿ ಅಭಿಮಾನಿಗಳ ಕೆರಳಿಸಿತ್ತು. ಇದಕ್ಕೆ ಕೊಹ್ಲಿ ಲಕ್ನೋ ಪಂದ್ಯದ ವೇಳೆ ಸೇಡು ತೀರಿಸಿಕೊಂಡಿದ್ದರು. ಆದರೆ ಅಂದು ಅನಗತ್ಯವಾಗಿ ಸಂಘರ್ಷದಲ್ಲಿ ಆಗಮಿಸಿದ್ದ ಗಂಭೀರ್ ಮಾತ್ರ ಇನ್ನೂ ಅರ್ ಸಿಬಿ ಅಭಿಮಾನಿಗಳ ಟಾರ್ಗೆಟ್ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ