
ಆರ್ ಸಿಬಿ
ಹೈದರಾಬಾದ್: ಐಪಿಎಲ್ 2023ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು 187 ರನ್ ಗಳ ಗುರಿ ಪಡೆದಿದೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಿದ್ದು ಆರ್ ಸಿಬಿಗೆ 187 ರನ್ ಗಳ ಗುರಿ ನೀಡಿದೆ.
ಹೈದರಾಬಾದ್ ಪರ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 51 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿಗಳ ನೆರವಿನೊಂದಿಗೆ 104 ರನ್ ಪೇರಿಸಿದ್ದು ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು.
ಇನ್ನುಳಿದಂತೆ ಅಭಿಶೇಕ್ ಶರ್ಮಾ 11, ರಾಹುಲ್ ತ್ರಿಪಾಠಿ 15, ಮಾರ್ಕ್ರಾಮ್ 18 ಮತ್ತು ಬ್ರೋಕ್ ಅಜೇಯ 27 ರನ್ ಪೇರಿಸಿದ್ದಾರೆ. ಆರ್ ಸಿಬಿ ಪರ ಬ್ರಾಸ್ವೆಲ್ 2, ಸಿರಾಜ್, ಅಹ್ಮದ್ ಮತ್ತು ಹರ್ಷಲ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.