IPL 2024 auction: ಡಿಸೆಂಬರ್ 19 ರಂದು ದುಬೈನಲ್ಲಿ 2024ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ!

ಐಪಿಎಲ್ 2024ರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ದೇಶದ ಹೊರಗೆ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐಪಿಎಲ್ 2024ರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ದೇಶದ ಹೊರಗೆ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಕ್ರಿಕೆಟ್ ವೆಬ್‌ಸೈಟ್ ಕ್ರಿಕ್ ಇನ್ಫೋ ಪ್ರಕಾರ, 10 ಐಪಿಎಲ್ ತಂಡಗಳಿಗೆ ನವೆಂಬರ್ 15ರವರೆಗೆ ಸಮಯವಿದೆ. ಇದರಲ್ಲಿ ಅವರು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತಕ್ಕೆ ಸಲ್ಲಿಸಬಹುದು. ಇದಾದ ನಂತರ ಡಿಸೆಂಬರ್ ಮೊದಲ ವಾರದೊಳಗೆ ಹರಾಜು ಪಟ್ಟಿ ಸಿದ್ಧಗೊಳ್ಳಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಟಗಾರರನ್ನು ಖರೀದಿಸಲು ತಂಡಗಳು 5 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬಿಡ್ ಮಾಡಬಹುದು. ಮಾಧ್ಯಮ ವರದಿಗಳ ಪ್ರಕಾರ, ಕಳೆದ ಋತುವಿನಲ್ಲಿ ಫ್ರಾಂಚೈಸಿಗೆ 95 ಕೋಟಿ ರೂಪಾಯಿ ನೀಡಲಾಗಿತ್ತು ಈ ಬಾರಿ 100 ಕೋಟಿಗೆ ಏರಿಸಲಾಗಿದೆ. ಅದಲ್ಲದೆ, ತಂಡಗಳು ಹಿಂದಿನ ಋತುವಿನ ಅಂದರೆ 2023ರ ಉಳಿದ ಮೊತ್ತವನ್ನು ಸಹ ಇಲ್ಲಿ ಬಿಡ್ ಮಾಡಬಹುದು.

ಪಂಜಾಬ್ ಕಿಂಗ್ಸ್ ಹೆಚ್ಚು ಹಣ ಹೊಂದಿದೆ
2024ರ ಐಪಿಎಲ್ ಋತುವಿಗೆ ತಂಡವನ್ನು ಸಿದ್ಧಪಡಿಸಲು ಪಂಜಾಬ್ ಕಿಂಗ್ಸ್ ಅತ್ಯಧಿಕ ಮೊತ್ತವನ್ನು ಹೊಂದಿದೆ. ಪಂಜಾಬ್ ಕಿಂಗ್ಸ್ ಗೆ ಕಳೆದ ಋತುವಿನಲ್ಲಿ 12.20 ಕೋಟಿ ರೂಪಾಯಿ ಉಳಿದಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದ ಬಳಿ ಕನಿಷ್ಠ 0.05 ಕೋಟಿ ಮೊತ್ತವಿದೆ. ಸನ್‌ರೈಸರ್ಸ್ ಹೈದರಾಬಾದ್ 6.55 ಕೋಟಿ, ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 4.45 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 3.55 ಕೋಟಿ, ರಾಜಸ್ಥಾನ ರಾಯಲ್ಸ್ 3.35 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 1.75 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 1.65 ಕೋಟಿ, ಚೆನ್ನೈ 1.65 ಕೋಟಿ ರೂಪಾಯಿ ಹೊಂದಿದೆ.

ಈ ಬಾರಿ ಹಲವು ವಿದೇಶಿ ಆಟಗಾರರು ಹರಾಜಿನಲ್ಲಿ ಭಾಗಿ?
ವಾಸ್ತವವಾಗಿ, ಐಪಿಎಲ್‌ನ ಮೆಗಾ ಹರಾಜು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ಐಪಿಎಲ್ ಮಿನಿ ಹರಾಜು ಪ್ರತಿ ವರ್ಷ ನಡೆಯುತ್ತದೆ. ಈ ಬಾರಿ ಮಿನಿ ಹರಾಜಿನಲ್ಲಿ ಹಲವು ವಿದೇಶಿ ಆಟಗಾರರು ಭಾಗವಹಿಸಬಹುದು. ಇತ್ತೀಚೆಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಎಂಟು ವರ್ಷಗಳ ನಂತರ ಐಪಿಎಲ್‌ಗೆ ಮರಳಬಹುದು ಎಂದು ಹೇಳಿದ್ದಾರೆ. ಇದಲ್ಲದೇ ಸ್ಯಾಮ್ ಬಿಲ್ಲಿಂಗ್ಸ್, ಜೆರಾಲ್ಡ್ ಕುಟೀಸ್, ಟ್ರಾವಿಸ್ ಹೆಡ್, ಕ್ರಿಸ್ ವೋಕ್ಸ್ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com