'ಇಂತಹ ಪ್ರಶ್ನೆಗಳನ್ನು ಕೇಳಬೇಡಿ': ಉಗ್ರಾವತಾರ ತಾಳಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!
2023ರ ಐಸಿಸಿ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ತಂಡವನ್ನು ಘೋಷಿಸಿದರು.
Published: 07th September 2023 12:28 AM | Last Updated: 07th September 2023 01:47 PM | A+A A-

ರೋಹಿತ್ ಶರ್ಮಾ
2023ರ ಐಸಿಸಿ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ತಂಡವನ್ನು ಘೋಷಿಸಿದರು.
ಇದಾದ ನಂತರ ಇಬ್ಬರೂ ಒಟ್ಟಾಗಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ನಿರೀಕ್ಷೆಗಳು ಮತ್ತು ಹೊರಗಿನ ಪರಿಸರದ ಬಗ್ಗೆ ಪ್ರಶ್ನಿಸಿದಾಗ ಅವರು ಕೋಪಗೊಂಡರು. ರೋಹಿತ್ ಉತ್ತರಿಸಿದ ರೀತಿ, ಕೋಪ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಈ ಪ್ರಶ್ನೆಯನ್ನು ಕ್ಯಾಪ್ಟನ್ ರೋಹಿತ್ ಹೆಚ್ಚು ಇಷ್ಟಪಡಲಿಲ್ಲ. ರೋಹಿತ್ ವರದಿಗಾರನನ್ನು ತಮ್ಮದೇ ಆದ ಶೈಲಿಯಲ್ಲಿ ನಿಂದಿಸಿದರು. 'ನೋಡಿ, ಇದು ಹೆಚ್ಚು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದೀಗ ವಿಶ್ವಕಪ್‌ನಲ್ಲಿಯೂ ಈ ಎಲ್ಲಾ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ವಿಶ್ವಕಪ್ ಈ ವಾತಾವರಣದಲ್ಲಿ ನಡೆಯುತ್ತದೆ ಎಂದು ಹೇಳಿದರು.
Rohit sharma just bodied a journalist
— Ansh Shah (@asmemesss) September 5, 2023
This guy is savage pic.twitter.com/J5wg9XlTrT
ತಂಡದಲ್ಲಿ ಸ್ಥಾನ ಸಿಗದ ಆಟಗಾರರ ಬಗ್ಗೆ ಮಾತನಾಡಿದ ರೋಹಿತ್, ಕೆಲವೊಮ್ಮೆ ತಂಡದ ಮ್ಯಾನೇಜ್‌ಮೆಂಟ್ ತಂಡದ ಲಾಭಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 'ತಂಡದಲ್ಲಿ ನಿಮ್ಮ ಸ್ಥಾನಕ್ಕಾಗಿ ಹೋರಾಡುವುದು ಕೆಟ್ಟ ವಿಷಯವಲ್ಲ. ಸವಾಲುಗಳು ಹೆಚ್ಚಾಗುತ್ತವೆ ಮತ್ತು ಆಯ್ಕೆಯು ಕಠಿಣವಾಗುತ್ತದೆ. ಯಾರು ಫಾರ್ಮ್‌ನಲ್ಲಿದ್ದಾರೆ. ಎದುರಾಳಿ ತಂಡವನ್ನು ಪರಿಗಣಿಸಿ ಯಾವ ಆಟಗಾರ ಲಾಭ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ: ರಾಹುಲ್, ಸೂರ್ಯಕುಮಾರ್ ಗೆ ಸ್ಥಾನ
ಕ್ರಿಕೆಟ್ ನಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವೇಗಿಗಳ ದಾಳಿಯನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದ ಬುಮ್ರಾ ಇತ್ತೀಚೆಗೆ ತಂಡಕ್ಕೆ ಮರಳಿದ್ದಾರೆ. ಎಡಗೈ ಮಣಿಕಟ್ಟಿನ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ನಿಭಾಯಿಸಲಿದ್ದಾರೆ. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿಲ್ಲ.