ತಮೀಮ್ ಇಕ್ಬಾಲ್ ತಂಡಕ್ಕಿಂತ ತಮ್ಮ ವೈಯಕ್ತಿಕ ಸಾಧನೆಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ: ನಾಯಕ ಶಕೀಬ್ ಅಲ್ ಹಸನ್

2023ರ ಐಸಿಸಿ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಿದ್ದು ಅದರಲ್ಲಿ ಮಾಜಿ ನಾಯಕ ತಮೀಮ್ ಇಕ್ಬಾಲ್ ಹೆಸರು ಕೈಬಿಡಲಾಗಿತ್ತು. ಇನ್ನು ತಮೀಮ್ ಇಕ್ಬಾಲ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ನಡುವೆ ಕೆಲ ಸಮಯ ಭಿನ್ನಾಭಿಪ್ರಾಯವಿತ್ತು.
ತಮೀಮ್-ಶಕೀಬ್
ತಮೀಮ್-ಶಕೀಬ್
Updated on

ಢಾಕಾ: 2023ರ ಐಸಿಸಿ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಿದ್ದು ಅದರಲ್ಲಿ ಮಾಜಿ ನಾಯಕ ತಮೀಮ್ ಇಕ್ಬಾಲ್ ಹೆಸರು ಕೈಬಿಡಲಾಗಿತ್ತು. ಇನ್ನು ತಮೀಮ್ ಇಕ್ಬಾಲ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ನಡುವೆ ಕೆಲ ಸಮಯ ಭಿನ್ನಾಭಿಪ್ರಾಯವಿತ್ತು. ಇದೆಲ್ಲದರ ನಡುವೆ ತಮೀಮ್ ನಾಯಕತ್ವವನ್ನು ಸಹ ತ್ಯಜಿಸಿದ್ದರು. 

ಇನ್ನು ಬಾಂಗ್ಲಾದೇಶದ ನಾಯಕ ಶಬಿಕ್ ಅಲ್ ಹಸನ್ ತಮೀಮ್ ಇಕ್ಬಾಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. 2023ರ ಐಸಿಸಿ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದಲ್ಲಿ ತಮೀಮ್ ಇಕ್ಬಾಲ್‌ಗೆ ಏಕೆ ಸ್ಥಾನ ನೀಡದಿರುವುದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಶಕೀಬ್ ಅವರು ತಮೀಮ್ ನೀನು ಸ್ವಾರ್ಥಿ, ನಾವು ತಂಡದಲ್ಲಿರುವಾಗ ನಮಗೆ ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವು ಮುಖ್ಯವಾಗಬೇಕು. ನೀವು ಶತಕ ಬಾರಿಸಿದರೂ ತಂಡ ಸೋತರೆ ನಿಮ್ಮ ಶತಕಕ್ಕೆ ಅರ್ಥವೇ ಇಲ್ಲ. ನೀವು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.

'ರೋಹಿತ್ ಶರ್ಮಾ ಅವರು ತಮ್ಮ ವೃತ್ತಿಜೀವನವನ್ನು ನಂಬರ್-7 ರಿಂದ ಆಟ ಪ್ರಾರಂಭಿಸಿದ್ದು ಈಗ ಓಪನರ್ ಆಗಿ 10,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ತಂಡಕ್ಕಾಗಿ ನಂಬರ್-3 ಅಥವಾ ನಂಬರ್-4ರಲ್ಲಿ ಬ್ಯಾಟ್ ಮಾಡಲು ಬಂದರೆ ಅದರಲ್ಲಿ ಏನಾದರೂ ದೊಡ್ಡ ಸಮಸ್ಯೆ ಇದೆಯೇ?  ತಂಡಕ್ಕಾಗಿ ಆಟಗಾರ ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ.

'ತಂಡದ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಬ್ಯಾಟಿಂಗ್ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬ್ಯಾಟ್ಸ್‌ಮನ್ ಸಿದ್ಧರಾಗಿರಬೇಕು. ತಂಡವು ಮೊದಲು ಬರುತ್ತದೆ. ನೀವು ಶತಕ ಅಥವಾ ದ್ವಿಶತಕ ಗಳಿಸಿದರೂ ತಂಡ ಸೋತರೆ ಅದರಿಂದಾಗುವ ಪ್ರಯೋಜನವೇನು? ನಿಮ್ಮ ವೈಯಕ್ತಿಕ ಸಾಧನೆಗಳನ್ನು ಏನು ಮಾಡುತ್ತೀರಿ?' ಇದಲ್ಲದೇ, ತಮೀಮ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವ ನಿರ್ಧಾರವು ಸಂಪೂರ್ಣವಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯದ್ದಾಗಿದೆ ಎಂದು ಶಕೀಬ್ ಸ್ಪಷ್ಟವಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com