
ಆಸ್ಟ್ರೇಲಿಯಾಗೆ 66 ರನ್ ಗಳ ಜಯ
ರಾಜ್ ಕೋಟ್: ರಾಜ್ ಕೋಟ್ ನಲ್ಲಿ ನಡೆದ ಆಸ್ಟ್ರೆಲಿಯ- ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ ಗಳ ಜಯ ಗಳಿಸಿದೆ.
ಆದರೆ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ 352 ರನ್ ಕಲೆ ಹಾಕಿತ್ತು. ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನಟ್ಟಿದ ಭಾರತಕ್ಕೆ 49.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 286 ರನ್ ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು.
ಇದನ್ನೂ ಓದಿ: ಮೂರನೇ ಏಕದಿನ ಪಂದ್ಯ: ಭಾರತಕ್ಕೆ 353 ರನ್ ಗಳ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ
ಭಾರತದ ಪರ ರೋಹಿತ್ ಶರ್ಮಾ 57 ಎಸೆತಗಳಲ್ಲಿ 81 ರನ್ ಗಳಿಸಿದರಾದರೂ ಏಕಾಂಗಿ ಹೋರಾಟವಾಯಿತು. ವಿರಾಟ್ ಕೊಹ್ಲಿ (61 ಎಸೆತಗಳಲ್ಲಿ 56 ರನ್) ಹಾಗೂ ಶ್ರೇಯಸ್ ಅಯ್ಯರ್ (43 ಎಸೆತಗಳಲ್ಲಿ 48 ರನ್) ಗಳಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ ಮ್ಯಾಕ್ಸ್ ವೆಲ್ ಈ ಜೊತೆಯಾಟವನ್ನು ಮುರಿದ ಪರಿಣಾಮ ಭಾರತದ ಗೆಲುವಿನ ಆಸೆ ಕಮರಿತು.
ನಂತರ ಬಂದ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ ಅಂತಿಮವಾಗಿ ಭಾರತ 286 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.