
ಸಂಗ್ರಹ ಚಿತ್ರ
ರಾಜ್ ಕೋಟ್: ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 352 ರನ್ ಕಲೆ ಹಾಕಿದೆ.
ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಪೇರಿಸಿದ್ದು ಭಾರತಕ್ಕೆ 353 ರನ್ ಗಳ ಗುರಿ ನೀಡಿದೆ.
ಉತ್ತಮ ಆರಂಭಿಕ ಪಡೆದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 56 ರನ್ ಗಳಿಸಿ ಔಟಾದರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಿಚೆಲ್ ಮಾರ್ಶ್ 4 ರನ್ ಗಳಿಂದ ಶತಕ ವಂಚಿತರಾದರು. ಮಾರ್ಶ್ 84 ಎಸೆತಗಳಲ್ಲಿ 96 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: 9 ಎಸೆತದಲ್ಲಿ ಅರ್ಧಶತಕ, 34 ಬಾಲ್ ನಲ್ಲಿ ಶತಕ, T20 ಯಲ್ಲಿ 314 ರನ್: ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ನೇಪಾಳ!
ಇನ್ನು ಸ್ಟೀವ್ ಸ್ಮಿತ್ 74, ಮಾರ್ನಸ್ ಲ್ಯಾಬುಸ್ಚಾಗ್ನೆ 72 ರನ್ ಗಳಿಸಿ ಔಟಾದರೆ ಅಲೆಕ್ಸ್ ಕರ್ರಿ 11 ರನ್ ಗಳಿಗೆ ಔಟಾದರು. ಭಾರತ ಪರ ಬೌಲಿಂಗ್ ನಲ್ಲಿ ಜಸ್ ಪ್ರೀತ್ ಬುಮ್ರಾ 3, ಕುಲದೀಪ್ ಯಾದವ್ 2 ಮತ್ತು ಸಿರಾಜ್ ಹಾಗೂ ಪ್ರಸಿದ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.