9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ ನಲ್ಲಿ ಶತಕ, T20 ಯಲ್ಲಿ 314 ರನ್‌: ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ನೇಪಾಳ!

ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಕ್ರಿಕೆಟ್ ಶಿಶು ನೇಪಾಳ ಅಕ್ಷರಶಃ ಇತಿಹಾಸದ ಅಪರೂಪದ ದಾಖಲೆ ನಿರ್ಮಿಸಿದೆ.
ಇತಿಹಾಸ ಬರೆದ ನೇಪಾಳ
ಇತಿಹಾಸ ಬರೆದ ನೇಪಾಳ

ಹ್ಯಾಂಗ್ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಕ್ರಿಕೆಟ್ ಶಿಶು ನೇಪಾಳ ಅಕ್ಷರಶಃ ಇತಿಹಾಸದ ಅಪರೂಪದ ದಾಖಲೆ ನಿರ್ಮಿಸಿದೆ.

9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ಗಳಲ್ಲಿ ಶತಕ, T20ಯಲ್ಲಿ 314 ರನ್‌..ಹೌದು.. ಇದು ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಸ್ಕೋರ್ ಕಾರ್ಡ್.. ಏಷ್ಯನ್ ಗೇಮ್ಸ್ ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಇತಿಹಾಸ ಸೃಷ್ಟಿಸಿದೆ. ಪುರುಷರ ಟೂರ್ನಮೆಂಟ್ ಆರಂಭವಾಗುತ್ತಿದ್ದಂತೆ ಸರಣಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ ಸರಮಾಲೆಯೇ ನಿರ್ಮಾಣವಾಗಿದೆ.

ನೇಪಾಳ ತಂಡವು ಮಂಗೋಲಿಯಾ ವಿರುದ್ಧ 20 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಬರೊಬ್ಬರಿ 314 ರನ್ ಗಳ ನಂಬಲಸಾಧ್ಯವಾದ ಸ್ಕೋರ್ ದಾಖಲಿಸಿದೆ. ಈ ಮೊತ್ತದಲ್ಲಿ 9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ಗಳಲ್ಲಿ ಶತಕಲೂ ಸೇರಿದೆ. ಒಟ್ಟಾರೆ ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ನೇಪಾಳ ಅಚ್ಚರಿ ಮೂಡಿಸಿದೆ. ಅಂತೆಯೇ ಚುಟುಕು ಕ್ರಿಕೆಟ್ ಅಂತಾರಾಷ್ಟ್ರೀಯ ಟಿ20ಯಲ್ಲಿ 300 ರನ್​ಗಳ ಗಡಿಯನ್ನು ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ನೇಪಾಳ ಪಾತ್ರವಾಗಿದೆ. 

9 ಎಸೆತಗಳಲ್ಲಿ ಅರ್ಧ ಶತಕ: ಯುವಿ ದಾಖಲೆ ಕೂಡ ಪತನ, ರೋಹಿತ್ ದಾಖಲೆಯೂ ಲೆಕ್ಕಕ್ಕಿಲ್ಲ
2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ನೇಪಾಳ ಬ್ಯಾಟರ್​ ದೀಪೇಂದ್ರ ಸಿಂಗ್ ಐರಿ ಮುರಿದರು. ಅವರು 9 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು, ಅದರಲ್ಲಿ 48 ರನ್​ಗಳು ಸಿಕ್ಸರ್​ಗಳ ಮೂಲಕೇ ಬಂದಿದ್ದವು.

ಮಾತ್ರವಲ್ಲದೇ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯೂ ಮುರಿಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​​ ಡೇವಿಡ್ ಮಿಲ್ಲರ್ ಅವರನ್ನು ಹಿಂದಿಕ್ಕಿದ ನೇಪಾಳ ಬ್ಯಾಟರ್​​ ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವೇಗವಾಗಿ ಶತಕ ಗಳಿಸಿದರು. ಇಬ್ಬರೂ ಬ್ಯಾಟರ್​ಗಳಲ್ಲಿ 35 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು. ಮಲ್ಲಾ 8 ಬೌಂಡರಿ ಮತ್ತು 12 ಸಿಕ್ಸರ್​ಗಳನ್ನು ಬಾರಿಸಿ ಕೇವಲ 50 ಎಸೆತಗಳಲ್ಲಿ 137 ರನ್ ಗಳಿಸಿ ಅಜೇಯರಾಗಿ ಉಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com