2ನೇ ಏಕದಿನ: ಇಂದೋರ್ ನಲ್ಲಿ ಮುಂದುವರೆದ ಭಾರತ ತಂಡದ ಜೈತ್ರಯಾತ್ರೆ, ದಾಖಲೆ ನಿರ್ಮಾಣ!

ಇಂದೋರ್ ನ ಹೋಳ್ಕರ್ ಕ್ರೀಡಾಂಗಣ ಭಾರತ ತಂಡ ಲಕ್ಕಿ ಮೈದಾನವಾಗಿ ಮಾರ್ಪಾಟಾಗಿದ್ದು, ಈ ಮೈದಾನದಲ್ಲಿನ ಭಾರತ ಕ್ರಿಕೆಟ್ ತಂಡದ ಜೈತ್ರ ಯಾತ್ರೆ ಅಭೇಧ್ಯವಾಗಿ ಮುಂದುವರೆದಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ
Updated on

ಇಂದೋರ್: ಇಂದೋರ್ ನ ಹೋಳ್ಕರ್ ಕ್ರೀಡಾಂಗಣ ಭಾರತ ತಂಡ ಲಕ್ಕಿ ಮೈದಾನವಾಗಿ ಮಾರ್ಪಾಟಾಗಿದ್ದು, ಈ ಮೈದಾನದಲ್ಲಿನ ಭಾರತ ಕ್ರಿಕೆಟ್ ತಂಡದ ಜೈತ್ರ ಯಾತ್ರೆ ಅಭೇಧ್ಯವಾಗಿ ಮುಂದುವರೆದಿದೆ.

ಹೌದು.. ನಿನ್ನೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 99ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ ಗೆಲ್ಲಲು 400ರನ್ ಗಳ ಗುರಿ ನೀಡಿತ್ತು.

ಆದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ ಆಸ್ಚ್ರೇಲಿಯಾಗೆ ಗೆಲಲ್ಲು 33 ಓವರ್ ನಲ್ಲಿ 317ರನ್ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನು ಹತ್ತಿದ ಆಸ್ಚ್ರೇಲಿಯಾ ತಂಡ 28.2 ಓವರ್ ನಲ್ಲಿ 217ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತದ ಎದುರು 99ರನ್ ಗಳ ಅಂತರದಲ್ಲಿ ಶರಣಾಯಿತು.

ಆ ಮೂಲಕ ಇಂದೋರ್ ಮೈದಾನದಲ್ಲಿ ಭಾರತ ಸತತ 7ನೇ ಗೆಲುವು ಸಾಧಿಸಿ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದೆ. ಒಂದು ಕ್ರೀಡಾಂಗಣದಲ್ಲಿ ಸೋಲಿಲ್ಲದ ಸತತ ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಈಗ ಪಾಕಿಸ್ತಾನದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಪಾಕಿಸ್ತಾನ ಹೈದರಾಬಾದ್ ನ ನಿಯಾಜ್ ಕ್ರೀಡಾಂಗಣದಲ್ಲಿ ಸೋಲಿಲ್ಲದೇ ಸತತ 7 ಪಂದ್ಯಗಳನ್ನು ಗೆದ್ದಿತ್ತು. ಇದೀಗ ಈ ದಾಖಲೆಯನ್ನು ಭಾರತ ಸರಿಗಟ್ಟಿದ್ದು, ಭಾರತ ಕೂಡ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ಸತತ 7 ಪಂದ್ಯಗಳನ್ನು ಗೆದ್ದು ಈ ದಾಖಲೆ ಸರಿಗಟ್ಟಿದೆ.

ಉಳಿದಂತೆ ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲಿದ್ದು, ಕಿವೀಸ್ ಪಡೆ ಡುನೆಡಿನ್ ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ಸತತ 9 ಪಂದ್ಯಗಳನ್ನು ಜಯಿಸಿದೆ. 2ನೇ ಸ್ಥಾನದಲ್ಲಿರುವ ಪಾಕಿಸ್ತಾನ ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ಸತತ 8 ಪಂದ್ಯಗಳನ್ನು ಜಯಿಸಿದೆ.

Most ODI wins without a defeat at a venue
9 - New Zealand - University Oval, Dunedin
8 - Pakistan - Queens Sports Club, Bulawayo (1 NR)
7 - Pakistan - Niaz Stadium, Hyderabad (PAK)
7 - India - Holkar Cricket Stadium, Indore

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com