ಲಾಹೋರ್: ಪಾಕಿಸ್ತಾನಿ ಸ್ಟಾರ್ ಕ್ರಿಕೆಟಿಗನೋರ್ವನ ವಿರುದ್ಧ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದು, ಕ್ರಿಕೆಟಿಗ ತನಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಖ್ಯಾತ ನಟಿ ನವಾಲ್ ಸಯೀದ್ ಈ ಗಂಭೀರ ಆರೋಪ ಮಾಡಿದ್ದು, ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೊಯೆಬ್ ಮಲ್ಲಿಕ್ ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನಟಿ ಹೇಳಿದ್ದು ಶೊಯೆಬ್ ಮಲ್ಲಿಕ್ ಗೇ ಎಂದು ಸಾಮಾಜಿಕ ತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.
ಪಾಕಿಸ್ತಾನದ ಚಾಟ್ ಶೋ ‘ಲೈಫ್ ಗ್ರೀನ್ ಹೇ’ ಕಾರ್ಯಕ್ರಮವೊಂದರಲ್ಲಿ ಪಾಕ್ ನಟಿ ನವಾಲ್ ಸಯೀದ್ ನೀಡಿದ ಒಂದು ಶಾಕಿಂಗ್ ಹೇಳಿಕೆ ಬಳಿಕ ಈ ಅನುಮಾನ ಹುಟ್ಟಿಕೊಂಡಿದೆ. ಸಂದರ್ಶನದಲ್ಲಿ ಮಾತನಾಡಿದ ಈ ನಟಿ, ಮದುವೆ ಆದ ಪಾಕಿಸ್ತಾನ ಕ್ರಿಕೆಟರ್ಗಳು ನನಗೆ ಮೆಸೇಜ್ ಮಾಡುತ್ತಾರೆ ಎಂದು ಹೇಳಿದರು. ಅವರ ಈ ಹೇಳಿಕೆಯನ್ನು ಪರೋಕ್ಷವಾಗಿ ನೆಟ್ಟಿಗರು ಶೋಯಿಬ್ ಮಲಿಕ್ಗೆ ಹೋಲಿಕೆ ಮಾಡುತ್ತಿದ್ದಾರೆ.
ನವಾಲ್ ಅವರು ನನಗೆ ಮದುವೆ ಆದವರು, ಈಗಲೇ ಪ್ರೀತಿಯಲ್ಲಿ ಇರೋ ಕ್ರಿಕೆಟರ್ಗಳ ಫ್ಲರ್ಟ್ ಮೆಸೇಜ್ಗಳು ಬರುತ್ತಿವೆ ಎಂದು ಹೇಳಿದ ತಕ್ಷಣ ಸಂದರ್ಶಕ ಯಾರು ಆ ಕ್ರಿಕೆಟಿಗ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಮತ್ತೋರ್ವ ಸಂದರ್ಶಕಿ ಶೋಯಿಬ್ ಮಲ್ಲಿಕ್ ಕೂಡ ಇದ್ದಾರ ಎಂದು ಕೇಳಿದ್ದಾರೆ. ಈ ವೇಳೆ ನಟಿ ನವಾಲ್ ಸಯ್ಯೀದ್ ಜೋರಾಗಿ ನಕ್ಕಿದ್ದಾರೆ. ನೆಟ್ಟಿಗರು ಈ ನಗುವಿನ ಅರ್ಥವನ್ನು ಬೇರೆಯೇ ರೀತಿಯಲ್ಲಿ ಕಲ್ಪಿಸಿದ್ದು ಮೂರನೇ ಮದುವೆಯದರೂ ಕೂಡ ಮಲಿಕ್ ಪೋಲಿ ಬುದ್ಧಿ ಬಿಟ್ಟಿಲ್ಲ ಎಂದು ಟೀಕಿಸಲಾರಂಭಿಸಿದ್ದಾರೆ.
ಇತ್ತೀಚೆಗಷ್ಟೇ ಸಾನಿಯಾಗೆ ವಿಚ್ಛೇದನ ನೀಡಿ 3ನೇ ಮದುವೆಯಾಗಿದ್ದ ಶೊಯೆಬ್ ಮಲ್ಲಿಕ್
ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಇತ್ತೀಚೆಗಷ್ಟೇ ತನ್ನ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರಿಗೆ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ರನ್ನು 3ನೇ ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಶೊಯೆಬ್ ತಮ್ಮ ಮೂರನೇ ಪತ್ನಿ ಸನಾ ಜಾವೇದ್ ಅವರ 31 ನೇ ಹುಟ್ಟುಹಬ್ಬವನ್ನು ಜತೆಯಾಗಿ ಆಚರಿಸಿದ್ದರು. ಈ ಫೋಟೊವನ್ನು ಕೂಡ ಮಲಿಕ್ ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದರು. ಈ ಫೋಟೋಗಳಿಗೂ ಸಾನಿಯಾ ಅಭಿಮಾನಿಗಳು ಭಾರಿ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಈ ದಶಕ ಕಂಡ ಅತ್ಯಂತ ಕೆಟ್ಟ ಜೋಡಿ ಎಂದು ಟೀಕಿಸುತ್ತಿದ್ದಾರೆ.
Advertisement