ಧೋನಿಯನ್ನು ನೋಡಲು ತನ್ನ ಹೆಣ್ಣುಮಕ್ಕಳ ಶಾಲಾ ಫೀಸ್‌ಗೆ ಇಟ್ಟಿದ್ದ 64,000 ರೂಪಾಯಿ ಕೊಟ್ಟು IPL ಟಿಕೆಟ್ ಖರೀದಿಸಿದ ಅಭಿಮಾನಿ!

ಮಹೇಂದ್ರ ಸಿಂಗ್ ಧೋನಿ (IPL 2024) ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಕಟ್ಟಾ ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ (CSK) ಟಿಕೆಟ್ ಅನ್ನು 64,000 ರೂಪಾಯಿ ಕೊಟ್ಟು ಖರೀದಿಸಿದ್ದಾಗಿ ಎಂದು ಹೇಳಿಕೊಂಡಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
Updated on

ಮಹೇಂದ್ರ ಸಿಂಗ್ ಧೋನಿ (IPL 2024) ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಕಟ್ಟಾ ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ (CSK) ಟಿಕೆಟ್ ಅನ್ನು 64,000 ರೂಪಾಯಿ ಕೊಟ್ಟು ಖರೀದಿಸಿದ್ದಾಗಿ ಎಂದು ಹೇಳಿಕೊಂಡಿದ್ದಾರೆ.

ಇದಕ್ಕಾಗಿ ಈ ಅಭಿಮಾನಿ ತನ್ನ ಹೆಣ್ಣು ಮಕ್ಕಳ ಶಾಲಾ ಶುಲ್ಕ ಪಾವತಿಯನ್ನು ತಡಮಾಡಿದ್ದಾನೆ. ಅಭಿಮಾನಿ ಮೊದಲು ಟಿಕೆಟ್ ಪಡೆಯಲು ಬಯಸಿದ್ದರು. ಇದಕ್ಕಾಗಿ ಆತ ತಮ್ಮ ಮೂವರು ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಯನ್ನು ವಿಳಂಬ ಮಾಡಿದರು. ಈ ಅಭಿಮಾನಿಯೊಂದಿಗೆ ಅವರ ಮೂವರು ಪುತ್ರಿಯರು ಚೆನ್ನೈ ಪಂದ್ಯವನ್ನು ವೀಕ್ಷಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈ ಅಭಿಮಾನಿ ಹೇಳಿಕೊಂಡಿದ್ದಾರೆ. ಈ ಅಭಿಮಾನಿ 64 ಸಾವಿರ ರೂಪಾಯಿ ಖರ್ಚು ಮಾಡಿ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಟಿಕೆಟ್ ಖರೀದಿಸಿದ್ದಾನೆ. ಏಪ್ರಿಲ್ 8 ರಂದು ಐಪಿಎಲ್ 2024 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ಗೆ ಬಂದರು. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಈ ಟಿಕೆಟ್‌ಗಳನ್ನು ಪಡೆಯಲು ನನ್ನ ತಂದೆ ತುಂಬಾ ಕಷ್ಟಪಟ್ಟಿದ್ದಾರೆ. ಧೋನಿ ಆಡಲು ಬಂದಾಗ ನಾವು ತುಂಬಾ ಸಂತೋಷಪಟ್ಟಿದ್ದೇವೆ ಎಂದು ಅಭಿಮಾನಿಯ ಮಗಳು ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ವ್ಯಕ್ತಿಯ ಆದ್ಯತೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು, ಅನೇಕ ಜನರು ಈ ನಿರ್ಧಾರವನ್ನು ಟೀಕಿಸಿದರು.

ಎಂಎಸ್ ಧೋನಿ
ಎಂಎಸ್ ಧೋನಿ ಜೆರ್ಸಿ ಸಂಖ್ಯೆ ಇನ್ಮುಂದೆ ಯಾರಿಗೂ ಸಿಗಲ್ಲ: ಸಚಿನ್ ತೆಂಡುಲ್ಕರ್ ಸಾಲಿಗೆ ಸೇರಿದ ಕ್ಯಾಪ್ಟನ್ ಕೂಲ್!

ಐಪಿಎಲ್ 2024ರಲ್ಲಿ ಚೆನ್ನೈ ತಂಡ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಆಡುತ್ತಿದೆ. ಇದುವರೆಗೆ ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದು, 3ರಲ್ಲಿ ಗೆದ್ದು 2ರಲ್ಲಿ ಸೋತಿದ್ದಾರೆ. ಈಗ ಚೆನ್ನೈನ ಮುಂದಿನ ಪಂದ್ಯ ಏಪ್ರಿಲ್ 14ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com