ಕೊಲಂಬೊ: ಕೊಲಂಬೊದಲ್ಲಿ ನಡೆದ ಭಾರತ- ಶ್ರೀಲಂಕಾ ನಡುವಿನ 2ನೇ ಒಡಿಐ ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 32 ರನ್ ಗಳ ಗೆಲುವು ದಾಖಲಿಸಿದೆ.
ಲಂಕಾ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಒಡಿಐನಲ್ಲಿ ಪ್ರಥಮ ಬಾರಿಗೆ 6 ವಿಕೆಟ್ ಗಳಿಸಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3 ಪಂದ್ಯಗಳ ಸೀರೀಸ್ ನಲ್ಲಿ ಇದು ಎರಡನೇ ಪಂದ್ಯವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಂಕಾ ತಂಡದ ಬ್ಯಾಟ್ಸ್ಮನ್ ಗಳು ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯನ್ನು ಎದುರಿಸಿ ರನ್ ಗಳಿಸಲು ಹರಸಾಹಸಪಟ್ಟರು, ಆರಂಭಿಕ ಆಟಗಾರರಾದ ಪಾತುಂ ನಿಸ್ಸಾಂಕ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿ ಲಂಕಾ ತಂಡದ ಮೇಲೆ ಸಿರಾಜ್ ಒತ್ತಡ ಹೇರಿದರು. ಬಳಿಕ ಅವಿಷ್ಕಾ ಫೆರ್ನಾಂಡೋ ಮತ್ತು ಕುಸಾಲ್ ಮೆಂಡಿಸ್ 74 ರನ್ ಇನ್ನಿಂಗ್ಸ್ ಕಟ್ಟಿದರು.
ಕ್ರಮೇಣ ಲಂಕಾ ಬ್ಯಾಟ್ಸ್ ಮನ್ ಗಳು ಮಂಕಾದರಾದರೂ ತಂಡ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು.
ಲಂಕಾ ನೀಡಿದ ರನ್ ಗುರಿ ಚೇಸಿಂಗ್ ಗೆ ಮುಂದಾದ ಭಾರತದ ಪರ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿದರು. ರನ್ ಡಿಫೆಂಡಿಂಗ್ ನಲ್ಲಿ ಶ್ರೀಲಂಕಾ, ಅದ್ಭುತ ಪ್ರದರ್ಶನ ನೀಡಿದ್ದು, ಭರವಸೆಯ ಬ್ಯಾಟ್ಸ್ಮನ್ ಗಳಾದ ಶುಭ್ಮನ್ ಗಿಲ್ (35) ವಿರಾಟ್ ಕೊಹ್ಲಿ (14) ಶ್ರೇಯಸ್ ಅಯ್ಯರ್ (7) ನಿರಾಸೆ ಮೂಡಿಸಿದರು. ಶಿವಂ ದುಬೆ, ಕೆಎಲ್ ರಾಹುಲ್ ಗೋಲ್ಡನ್ ಡಕ್ ಗೆ ಬಲಿಯಾದರು. ಅಕ್ಸರ್ ಪಟೇಲ್ 44 ಎಸೆತಗಳಿಗೆ 44 ರನ್ ಗಳಿಸಿದರು.
Advertisement