ಭಾರತ ವಿರುದ್ಧದ ಐತಿಹಾಸಿಕ ಸರಣಿ ಗೆಲುವು ಬೆನ್ನಲ್ಲೇ ಲಂಕಾ ಸ್ಪಿನ್ನರ್‌ಗೆ ಶಾಕ್: ಫಿಕ್ಸಿಂಗ್ ಆರೋಪ

ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲೂ ತಲಾ ಐದು ಪಂದ್ಯಗಳನ್ನಾಡಿದ್ದಾರೆ.
ಪ್ರವೀಣ್ ಜಯವಿಕ್ರಮ
ಪ್ರವೀಣ್ ಜಯವಿಕ್ರಮ
Updated on

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ವಿರುದ್ಧ ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘನೆ ಸಂಬಂಧ ಮೂರು ಆರೋಪಗಳು ಕೇಳಿಬಂದಿದ್ದು, ಆರೋಪಗಳಿಗೆ ಪ್ರತಿಕ್ರಿಯಿಸಲು ಆಗಸ್ಟ್ 6 ರಿಂದ 14 ದಿನಗಳ ಕಾಲಾವಕಾಶವನ್ನು ಐಸಿಸಿ ನೀಡಿದೆ.

ಅಂತರಾಷ್ಟ್ರೀಯ ಪಂದ್ಯಗಳು ಮತ್ತು 2021ರ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಫಿಕ್ಸಿಂಗ್ ಮಾಡಲು ಅವರನ್ನು ಸಂಪರ್ಕಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಡಮಾಡದೆ ವರದಿ ಮಾಡಲು ಜಯವಿಕ್ರಮ ವಿಫಲರಾಗಿದ್ದಾರೆ ಎಂದು ಐಸಿಸಿ ಆರೋಪಿಸಿದೆ. ಶ್ರೀಲಂಕಾದ ಬೌಲರ್ ಮ್ಯಾಚ್ ಫಿಕ್ಸಿಂಗ್ ಗಾಗಿ ಸಂಪರ್ಕಿಸಿದ ಮೆಸೇಜ್ ಗಳನ್ನು ಅಳಿಸಿದ್ದರು.

ಶ್ರೀಲಂಕಾ ಸ್ಪಿನ್ನರ್ ವಿರುದ್ಧದ ಆರೋಪಗಳು

ಐಸಿಸಿಯ ಪ್ಯಾರಾಗ್ರಾಫ್ 2.4.4 - ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ತಮ್ಮನ್ನು ಸಂಪರ್ಕಿಸಿದ ಮಾಹಿತಿಯನ್ನು ಭ್ರಷ್ಟಾಚಾರ-ವಿರೋಧಿ ಘಟಕಕ್ಕೆ ವರದಿ ಮಾಡಲು ವಿಫಲವಾಗಿದ್ದಾರೆ.

ಲೇಖನ 2.4.7 ಸಂಪರ್ಕಗಳನ್ನು ಹೊಂದಿರುವ ಸಂದೇಶಗಳನ್ನು ಅಳಿಸುವ ಮೂಲಕ ತನಿಖೆ ದಿಕ್ಕು ತಪ್ಪಿಸುವ ಅಥವಾ ಭ್ರಷ್ಟ ನಡವಳಿಕೆಯಲ್ಲಿ ತೊಡಗಿರುವುದು ಕಾಣಿಸುತ್ತಿದೆ.

ಸಂಹಿತೆಯ ಆರ್ಟಿಕಲ್ಸ್ 1.7.4.1 ಮತ್ತು 1.8.1 ರ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮತ್ತು ಐಸಿಸಿ ಅಂತರಾಷ್ಟ್ರೀಯ ಪಂದ್ಯ ಶುಲ್ಕ ಹಾಗೂ ಲಂಕಾ ಪ್ರೀಮಿಯರ್ ಲೀಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಐಸಿಸಿ ಕ್ರಮ ಕೈಗೊಳ್ಳಲಿದೆ ಎಂದು ಒಪ್ಪಿಕೊಂಡಿವೆ.

ಶ್ರೀಲಂಕಾ ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ. 27 ವರ್ಷಗಳ ಬಳಿಕ ಲಂಕಾ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದು ಬೀಗಿತ್ತು.

ಪ್ರವೀಣ್ ಜಯವಿಕ್ರಮ
Cricket ODI: 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು, ಶ್ರೀಲಂಕಾಗೆ ಐತಿಹಾಸಿಕ ಸರಣಿ ಜಯ

ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲೂ ತಲಾ ಐದು ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 25 ವಿಕೆಟ್‌ಗಳನ್ನು ಪಡೆದಿರುವ ಅವರು, ಏಕದಿನದಲ್ಲಿ 5 ಮತ್ತು ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. ಪ್ರವೀಣ್ ಜಯವಿಕ್ರಮ ಭಾರತದ ವಿರುದ್ಧವೂ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com