ಬೆಂಗಳೂರು: ಮಹಾರಾಜ ಟ್ರೋಫಿಯ 17ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಮೂರನೇ ಸೂಪರ್ ಓವರ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ರೋಚಕ ಜಯ ಸಾಧಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಪಂದ್ಯ ಟೈ ಆಗಿತ್ತು. ಹೀಗಾಗಿ ಸೂಪರ್ ಓವರ್ ನೀಡಲಾಗಿತ್ತು. ಆದರೆ ಮೊದಲೆರೆಡು ಸೂಪರ್ ಓವರ್ ಗಳಲ್ಲಿ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಮೂರನೇ ಸೂಪರ್ ಓವರ್ ನೀಡಲಾಗಿತ್ತು. ಅಂತಿಮವಾಗಿ ಮೂರನೇ ಸೂಪರ್ ಓವರ್ನಲ್ಲಿ 13 ರನ್ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಮನ್ವಂತ್ ಕುಮಾರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ ನಿಗದಿತ ಓವರ್ ನಲ್ಲಿಲ್ಲಿ 164 ರನ್ ಗಳಿಗೆ ಸರ್ವಪತನ ಕಂಡಿತ್ತು. ತಂಡದ ಪರ ಮೊಹಮ್ಮದ್ ತಾಹ 31 ರನ್, ನಾಯಕ ಮನೀಶ್ ಪಾಂಡೆ 33 ರನ್ ಬಾರಿಸಿದರೆ, ಅನೀಶ್ವರ್ ಗೌತಮ್ 30 ರನ್ ಹಾಗೂ ಮನ್ವಂತ್ ಕುಮಾರ್ 28 ರನ್ ಬಾರಿಸಿದ್ದರು. ಹೀಗಾಗಿ ತಂಡ 164 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.
ಹುಬ್ಬಳ್ಳಿ ನೀಡಿದ 165 ರನ್ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ ಓವರ್ ನಲ್ಲಿ 164 ರನ್ ಬಾರಿಸಿದ್ದು ಪಂದ್ಯ ಟೈ ಆಗಿತ್ತು. ಬೆಂಗಳೂರು ಪರ ಮಾಯಾಂಕ್ ಅಗರ್ವಾಲ್ 54 ರನ್ ಬಾರಿಸಿದ್ದರು. ನಂತರ ಬಂದ ಸೂರಜ್ ಅಹುಜಾ 26 ಹಾಗೂ ನವೀನ್ 23 ರನ್ ಬಾರಿಸಿದರು. ಆದರೆ ಪಂದ್ಯ ಗೆಲ್ಲುಲು ಸಾಧ್ಯವಾಗಲಿಲ್ಲ.
Advertisement