ಜಯ್ ಶಾ ICC ಅಧ್ಯಕ್ಷರಾದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರು?

ಐಸಿಸಿ ಮಂಡಳಿಯ 16 ಸದಸ್ಯರ ಪೈಕಿ 15 ಸದಸ್ಯರು ಶಾ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇನ್ನೂ ಒಂದು ವರ್ಷ ಅಧಿಕಾರವಿರುವ ಬಿಸಿಸಿಐ ಕಾರ್ಯದರ್ಶಿಯಾಗಿ ಎಂಬುದನ್ನು ನಿರ್ಧರಿಸಲು ಸಮಯ ಕಡಿಮೆಯಿದೆ. ನೂತನ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನಾಂಕವಾಗಿದೆ.
ಜಯ್ ಶಾ
ಜಯ್ ಶಾ
Updated on

ನವದೆಹಲಿ: ಜಯ್ ಶಾ ಮುಂದಿನ ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ. ಅವರು ವಿಶ್ವದ ಅತ್ಯುನ್ನತ ಕ್ರಿಕೆಟ್ ಮಂಡಳಿಗೆ ಸೇರಲು ನಿರ್ಧರಿಸಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಒಂದು ವೇಳೆ ಅವರು ಐಸಿಸಿ ಅಧ್ಯಕ್ಷರಾದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರಾಗ್ತಾರೆ ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಐಸಿಸಿ ಮಂಡಳಿಯ 16 ಸದಸ್ಯರ ಪೈಕಿ 15 ಸದಸ್ಯರು ಶಾ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇನ್ನೂ ಒಂದು ವರ್ಷ ಅಧಿಕಾರವಿರುವ ಬಿಸಿಸಿಐ ಕಾರ್ಯದರ್ಶಿಯಾಗಿ ಎಂಬುದನ್ನು ನಿರ್ಧರಿಸಲು ಸಮಯ ಕಡಿಮೆಯಿದೆ. ನೂತನ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನಾಂಕವಾಗಿದೆ.

ಶಾ ನಂತರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿರುವ ಹಾಲಿ ಬಿಸಿಸಿಐ ಅಧ್ಯಕ್ಷ ರಾಜೀವ್ ಶುಕ್ಲಾ ಅವರನ್ನು ಒಂದು ವರ್ಷದವರೆಗೂ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಕೇಳುವ ಸಾಧ್ಯತೆಯಿದೆ ಆದರೆ, ಶುಕ್ಲಾ ಕಾರ್ಯದರ್ಶಿಯಾಗಲು ಖಂಡಿತವಾಗಿಯೂ ಒಪ್ಪುವ ಸಾಧ್ಯತೆಯಿಲ್ಲ.

ಮಹಾರಾಷ್ಟ್ರದ ಬಿಜೆಪಿ ಮುಖಂಡ, ಬಿಸಿಸಿಐ ಖಜಾಂಚಿ ಅಶಿಶ್ ಶೆಲ್ಲರ್ ಅವರ ಹೆಸರು ಕೇಳಿಬರುತ್ತಿದೆ. ಇವರಲ್ಲದೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ 'ಲೋನ್' ಸೈಕಿಯಾ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅಥವಾ ಮಾಜಿ ಸಿಎಬಿ ಅಧ್ಯಕ್ಷ ಅವಿಶೇಕ್ ದಲ್ಮಿಯಾ ಹೆಸರು ಕೂಡಾ ಚರ್ಚೆಯಾಗುತ್ತಿದೆ.

ಜಯ್ ಶಾ
ಐತಿಹಾಸಿಕ ದಾಖಲೆಯತ್ತ Jay Shah; ಕಿರಿಯ ವಯಸ್ಸಿಗೇ ಐಸಿಸಿ ಚುಕ್ಕಾಣಿ ಹಿಡಿಯುವತ್ತ BCCI ಕಾರ್ಯದರ್ಶಿ!

ನಿಸ್ಸಂಶಯವಾಗಿ ಯಾವುದೇ ಕಠಿಣ ನಿಯಮಗಳಿಲ್ಲದಿರುವುದರಿಂದ ಇದು ಸಂಭವಿಸಬಹುದು. ಆದರೆ ನೀವು ಬಿಸಿಸಿಐನ ಅಧಿಕಾರ ಸ್ಥಾನಗಳನ್ನು ನೋಡಿದರೆ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಮೂರು ಪ್ರಮುಖ ಹುದ್ದೆಗಳು" ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com