Jay Shah
ಜಯ್ ಶಾ

ಐತಿಹಾಸಿಕ ದಾಖಲೆಯತ್ತ Jay Shah; ಕಿರಿಯ ವಯಸ್ಸಿಗೇ ಐಸಿಸಿ ಚುಕ್ಕಾಣಿ ಹಿಡಿಯುವತ್ತ BCCI ಕಾರ್ಯದರ್ಶಿ!

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅವಧಿಯು ಈ ವರ್ಷ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ.
Published on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮೇಲೆ ಮತ್ತೆ ಭಾರತ ಪ್ರಾಬಲ್ಯ ಸಾಧಿಸಿದ್ದು, ಕೇವಲ 35 ವರ್ಷಕ್ಕೇ ಐಸಿಸಿ ಚುಕ್ಕಾಣಿ ಹಿಡಿಯುವತ್ತ BCCI ಕಾರ್ಯದರ್ಶಿ ಜಯ್ ಶಾ ದಾಪುಗಾಲಿರಿಸಿದ್ದಾರೆ.

ಹೌದು.. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅವಧಿಯು ಈ ವರ್ಷ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ.

ಐಸಿಸಿ ಅಧ್ಯಕ್ಷ ಸ್ಥಾನದಿಂದ ಮೂರನೇ ಅವಧಿಗೆ ಕೆಳಗಿಳಿಯುತ್ತಿರುವುದಾಗಿ ಅವರು ಘೋಷಿಸಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಐಸಿಸಿ ಮೇಲೆ ಅಧಿಕಾರದ ಚುಕ್ಕಾಣಿ ಮೇಲೆ ಕಣ್ಣಿಟ್ಟಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಐಸಿಸಿ ಅಧ್ಯಕ್ಷರಾಗುವ ಹಾದಿ ಸುಗಮವಾಗಿದೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಆಗಸ್ಟ್ 27 ರೊಳಗೆ ಜಯ್ ಶಾ ಅವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಐಸಿಸಿ ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಸ್ಪರ್ಧಿಸಬಹುದು. ನ್ಯೂಜಿಲೆಂಡ್‌ನ ಬಾರ್ಕ್ಲೇಸ್ ಇಲ್ಲಿಯವರೆಗೆ ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ.

Jay Shah
T20 World Cup: ಒತ್ತಡಕ್ಕೆ ಮಣಿದು ಹಾರ್ದಿಕ್ ಪಾಂಡ್ಯ ಆಯ್ಕೆ? ಸುಳಿವು ನೀಡಿದ ಜಯ್ ಶಾ ಹೇಳಿಕೆ

“ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಮಂಡಳಿಗೆ ದೃಢಪಡಿಸಿದ್ದಾರೆ. ನವೆಂಬರ್ ಅಂತ್ಯಕ್ಕೆ ಅವರ ಅವಧಿ ಮುಕ್ತಾಯವಾದಾಗ ಅವರು ಕೆಳಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ಬಾರ್ಕ್ಲಿ ಅವರನ್ನು ನವೆಂಬರ್ 2020 ರಲ್ಲಿ ICC ಯ ಸ್ವತಂತ್ರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು 2022 ರಲ್ಲಿ ಹುದ್ದೆಗೆ ಮರು ಆಯ್ಕೆಯಾದರು. ಐಸಿಸಿ ನಿಯಮಗಳ ಪ್ರಕಾರ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ಗೆಲ್ಲಲು 9 ಮತಗಳ (ಶೇ.51) ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಮೂರನೇ ಎರಡರಷ್ಟು ಬಹುಮತ ಬೇಕಿತ್ತು.

“ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಚುನಾವಣೆ ನಡೆಯಲಿದ್ದು, 2024ರ ಡಿಸೆಂಬರ್ 1ರಿಂದ ನೂತನ ಅಧ್ಯಕ್ಷರ ಅವಧಿ ಆರಂಭವಾಗಲಿದೆ ಎಂದು ಐಸಿಸಿ ಮೂಲಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com