ಮುಂಬೈ: ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಸ್ವದೇಶದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಹು-ಫಾರ್ಮ್ಯಾಟ್ ಸರಣಿಗಾಗಿ ಭಾರತ U-19 ತಂಡದಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ಮತ್ತು ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಆಲ್‌ರೌಂಡರ್ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ಸೆಪ್ಟೆಂಬರ್ 21, 23 ಮತ್ತು 26 ರಂದು ಪುದುಚೇರಿಯಲ್ಲಿ 50-ಓವರ್‌ಗಳ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ U-19 ತಂಡವನ್ನು ಭಾರತದ U-19 ತಂಡ ಎದುರಿಸಲಿದೆ. ನಂತರ ಚೆನ್ನೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7 ರಂದು ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.
ಉತ್ತರ ಪ್ರದೇಶದ ಮಧ್ಯಮ ಕ್ರಮಾಂಕದ ಮೊಹಮ್ಮದ್ ಅಮಾನ್ ಅವರನ್ನು 50 ಓವರ್‌ಗಳ ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ನಾಲ್ಕು ದಿನಗಳ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
ಸಮಿತ್ ದ್ರಾವಿಡ್ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಮಹಾರಾಜ T20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸಮಿತ್ ದ್ರಾವಿಡ್ ಏಳು ಇನ್ನಿಂಗ್ಸ್‌ಗಳಲ್ಲಿ 114 ಸ್ಟ್ರೈಕ್ ರೇಟ್‌ನಲ್ಲಿ 82 ರನ್ ಗಳಿಸಿದ್ದರು. ಶನಿವಾರ ನಡೆಯಲಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದೆ.
ಏಕದಿನ ಸರಣಿಗಾಗಿ ಭಾರತ U-19 ತಂಡ: ರುದ್ರ ಪಟೇಲ್, ಸಾಹಿಲ್ ಪರಾಖ್, ಕಾರ್ತಿಕೇಯ KP (KSCA), ಮೊಹಮ್ಮದ್ ಅಮಾನ್ (ನಾಯಕ) ಕಿರಣ್ ಚೋರ್ಮಲೆ, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್) ಹರಿವಂಶ್ ಸಿಂಗ್ ಪಂಗಾಲಿಯಾ, ಸಮಿತ್ ದ್ರಾವಿಡ್ (KSCA), ಯುಧಾಜಿತ್ ಗುಹಾ, ಸಮರ್ಥ್ ಎನ್ (KSCA), ನಿಖಿಲ್ ಕುಮಾರ್, ಚೇತನ್ ಶರ್ಮಾ , ಹಾರ್ದಿಕ್ ರಾಜ್ (KSCA), ರೋಹಿತ್ ರಾಜಾವತ್, ಮೊಹಮ್ಮದ್ ಎನಾನ್ (ಕೆಸಿಎ)
ನಾಲ್ಕು ದಿನಗಳ ಸರಣಿಗಾಗಿ ಭಾರತ U-19 ತಂಡ: ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್ (ನಾಯಕ) ಕಾರ್ತಿಕೇಯ K P (KSCA), ಸಮಿತ್ ದ್ರಾವಿಡ್ (KSCA), ), ಅಭಿಗ್ಯಾನ್ ಕುಂದು, ಹರಿವಂಶ್ ಸಿಂಗ್ ಪಂಗಾಲಿಯಾ, ಚೇತನ್ ಶರ್ಮಾ, ಸಮರ್ಥ್ N (KSCA), ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಇನಾನ್ (KCA).
Advertisement