SMAT 2024: IPL ಹರಾಜಿನಲ್ಲಿ ಖರೀದಿಯಾಗದಿದ್ರೂ ವೇಗದ ಶತಕ ಸಿಡಿಸಿ ತಮ್ಮ ಖದರ್ ತೋರಿಸಿದ ಉರ್ವಿಲ್ ಪಟೇಲ್

ಉರ್ವಿಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದು ಉತ್ತರಾಖಂಡ ವಿರುದ್ಧ 36 ಎಸೆತಗಳಲ್ಲಿ ಗಳಿಸಿದ ಶತಕವು ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ವೇಗದ ಶತಕವಾಗಿದೆ.
Urvil Patel
ಉರ್ವಿಲ್ ಪಟೇಲ್
Updated on

ಗುಜರಾತ್‌ನ ವಿಕೆಟ್‌ಕೀಪರ್ ಕಮ್ ಬ್ಯಾಟ್ಸ್‌ಮನ್ ಉರ್ವಿಲ್ ಪಟೇಲ್ ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2024ರಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ 28 ಎಸೆತಗಳಲ್ಲಿ ಶತಕ ಸಿಡಿಸಿದ್ದ ಉರ್ವಿಲ್ ಮತ್ತೆ ಉತ್ತರಾಖಂಡ ವಿರುದ್ಧ 36 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇನ್ನು ಎದುರಾಳಿ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ಯ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಸಹ ಇದ್ದರು.

ಗುಜರಾತ್‌ನ ಆರಂಭಿಕ ಬ್ಯಾಟ್ಸ್‌ಮನ್ ಉರ್ವಿಲ್ 41 ಎಸೆತಗಳಲ್ಲಿ 115 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್ ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದರು. ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ಎಂಟು ವಿಕೆಟ್‌ಗಳು ಮತ್ತು 35 ಎಸೆತಗಳು ಬಾಕಿ ಇರುವಂತೆಯೇ 183 ರನ್‌ಗಳ ಗುರಿಯನ್ನು ಸಾಧಿಸಲು ತಮ್ಮ ತಂಡಕ್ಕೆ ನೆರವಾದರು. ಈ ಪಂದ್ಯದಲ್ಲಿ ಮೊದಲು ಉತ್ತರಾಖಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು.

ಉರ್ವಿಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದು ಉತ್ತರಾಖಂಡ ವಿರುದ್ಧ 36 ಎಸೆತಗಳಲ್ಲಿ ಗಳಿಸಿದ ಶತಕವು ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ವೇಗದ ಶತಕವಾಗಿದೆ. ರಿಷಬ್ ಪಂತ್ ಮತ್ತು ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. SMAT 2018 ರಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಪಂತ್ 30 ಎಸೆತಗಳಲ್ಲಿ ಶತಕ ಗಳಿಸಿದರೆ, ರೋಹಿತ್ 2017 ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದರು.

ನವೆಂಬರ್ 27ರಂದು ಗುಜರಾತ್ ಮತ್ತು ತ್ರಿಪುರ ನಡುವಿನ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಕೇವಲ 28 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಉರ್ವಿಲ್ ಅವರ ಈ ಶತಕ ಟಿ20 ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕವಾಗಿದೆ. ಟಿ20ಯಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಹೆಸರಿನಲ್ಲಿತ್ತು. ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ದಾಖಲಿಸಿದವರು.

ಟಿ20 ಶತಕದಲ್ಲಿ ಅತಿ ವೇಗದ ಶತಕ

1. ಸಾಹಿಲ್ ಚೌಹಾನ್ (ಎಸ್ಟೋನಿಯಾ) - ಸೈಪ್ರಸ್ ವಿರುದ್ಧ 27 ಎಸೆತಗಳು (2024)

2. ಉರ್ವಿಲ್ ಪಟೇಲ್ (ಗುಜರಾತ್) - ತ್ರಿಪುರಾ ವಿರುದ್ಧ 28 ಎಸೆತಗಳು (2024)

3. ಕ್ರಿಸ್ ಗೇಲ್ (RCB) - ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳು (2013)

4. ರಿಷಬ್ ಪಂತ್ (ದೆಹಲಿ) - ಹಿಮಾಚಲ ಪ್ರದೇಶ ವಿರುದ್ಧ 32 ಎಸೆತಗಳು (2018)

5. ವಿಹಾನ್ ಲುಬ್ಬೆ (ನಾರ್ತ್-ವೆಸ್ಟ್) - ಲಿಂಪೊಪೊ ವಿರುದ್ಧ 33 ಎಸೆತಗಳು (2018)

ಮೂಲ ಬೆಲೆ 30 ಲಕ್ಷ ರೂ.

26 ವರ್ಷದ ಉರ್ವಿಲ್ ಪಟೇಲ್ ಅವರನ್ನು ಐಪಿಎಲ್ 2025ರ ಹರಾಜಿನಲ್ಲಿ 30 ಲಕ್ಷ ರೂ ಮೂಲ ಬೆಲೆಗೆ ಸೇರಿಸಲಾಯಿತು. ಆದರೆ ಅವರನ್ನು ಯಾವುದೇ ತಂಡವು ಖರೀದಿಸಲಿಲ್ಲ. ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಮೆಹ್ಸಾನಾ (ಬರೋಡಾ) ನಿವಾಸಿ ಉರ್ವಿಲ್, 2018ರಲ್ಲಿ ರಾಜ್‌ಕೋಟ್‌ನಲ್ಲಿ ಮುಂಬೈ ವಿರುದ್ಧದ ಟಿ 20 ಪಂದ್ಯದಲ್ಲಿ ಬರೋಡಾ ಪರ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ಅವರು ಲಿಸ್ಟ್-ಎ ಕ್ರಿಕೆಟ್‌ಗೆ ಪ್ರವೇಶಿಸಿದರು. ಆದರೆ ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡುವ ಮೊದಲು ಅವರು ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರು ವರ್ಷಗಳನ್ನು ತೆಗೆದುಕೊಂಡರು.

Urvil Patel
IPL Auction 2024: ಬಿಕರಿಯಾಗದೇ ಉಳಿದ ಉಮೇಶ್ ಯಾದವ್, ಆಂಡ್ರೆ ಸಿದ್ದಾರ್ಥ್, ರಿಶಾದ್ ಹೊಸೈನ್

ಉರ್ವಿಲ್ ಅವರನ್ನು ಗುಜರಾತ್ 20 ಲಕ್ಷಕ್ಕೆ ಖರೀದಿಸಿತ್ತು!

ಗುಜರಾತ್ ಟೈಟಾನ್ಸ್ 2023ರ ಋತುವಿನಲ್ಲಿ ಉರ್ವಿಲ್ ಅವರನ್ನು 20 ಲಕ್ಷ ರೂಪಾಯಿಗೆ ಖರೀದಿಸಿತ್ತು, ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಗುಜರಾತ್ ಬಿಡುಗಡೆ ಮಾಡಿದ ನಂತರ, ಉರ್ವಿಲ್ ಮುಂದಿನ ಆವೃತ್ತಿಗೆ ಯಾವುದೇ ತಂಡ ಖರೀದಿಸಿರಲಿಲ್ಲ. 44 T20 ಪಂದ್ಯಗಳಲ್ಲಿ 23.52ರ ಸರಾಸರಿಯಲ್ಲಿ ಮತ್ತು 164.11 ರ ಸ್ಟ್ರೈಕ್-ರೇಟ್‌ನಲ್ಲಿ 988 ರನ್ ಗಳಿಸಿದ್ದಾರೆ, ಅವರ ಹೆಸರಿಗೆ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com