ನಿಮ್ಮ ಬೌಲಿಂಗ್‌ನಲ್ಲಿ ತಾಕತ್ತಿಲ್ಲ: ಜೈಸ್ವಾಲ್ ಸ್ಲೆಡ್ಜಿಂಗ್ ಬಗ್ಗೆ ಮೌನ ಮುರಿದ ಮಿಚೆಲ್ ಸ್ಟಾರ್ಕ್, ವಿಡಿಯೋ!
ಪರ್ತ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರ ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 161 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದ್ದ ಜೈಸ್ವಾಲ್ 2ನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಎಲ್ಲರ ಮನಗೆದ್ದರು. ಆದಾಗ್ಯೂ, ಈ ಶತಕಕ್ಕಿಂತಲೂ ಯಶಸ್ವಿ ಅವರ ಹೇಳಿಕೆ ಹೆಚ್ಚು ಸುದ್ದಿಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕಾಂಗರೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದರು. ಸ್ಟಾರ್ಕ್ ಬೌಲಿಂಗ್ ವೇಗದ ಬಗ್ಗೆ ಗೇಲಿ ಮಾಡಿದರು.
ಇದೀಗ ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಇದೀಗ ಈ ಪಂದ್ಯದ ಆರಂಭಕ್ಕೂ ಒಂದು ದಿನ ಮೊದಲು ಸ್ಟಾರ್ಕ್ ಪ್ರತಿಕ್ರಿಯೆ ಹೊರಬಿದ್ದಿದೆ. ಈ ವಿಚಾರವಾಗಿ ಮಾತನಾಡಿ ಅವರು, 'ವಾಸ್ತವವಾಗಿ ಆಗ ನನಗೆ ಯಶಸ್ವಿ ಅವರ ಧ್ವನಿ ಕೇಳಲಿಲ್ಲ. ಈ ಸಮಯದಲ್ಲಿ ನಾನು ಜನರಿಗೆ ಹೆಚ್ಚು ಹೇಳುವುದಿಲ್ಲ. ಹೌದು, ನಾನು ಮೊದಲು ಮಾತನಾಡುತ್ತಿದ್ದೆ, ಆದರೆ ಈಗ ಅಲ್ಲ. ಅವರು ಅದ್ಭುತವಾದ ಫ್ಲಿಕ್ ಶಾಟ್ ಅನ್ನು ಆಡಿದರು. ನಾನು ಮುಂದಿನ ಚೆಂಡನ್ನು ಅದೇ ರೀತಿಯಲ್ಲಿ ಬೌಲ್ ಮಾಡಿದೆ. ಆದರೆ ನಂತರ ಅವರು ಅದನ್ನು ಸಮರ್ಥಿಸಿಕೊಂಡರು. ಹಾಗಾಗಿ ಫ್ಲಿಕ್ ಶಾಟ್ ಎಲ್ಲಿದೆ ಎಂದು ಹೇಳಿದೆ. ಇದಕ್ಕೆ ಅವರು ನಕ್ಕರು. ಅವರು ಕಳೆದ ಕೆಲವು ಸಮಯದಿಂದ ನಿರಂತರವಾಗಿ ಭಾರತಕ್ಕಾಗಿ ಆಡುತ್ತಿದ್ದು ಯಶಸ್ವಿಯಾಗಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಯಶಸ್ವಿ ಪರ್ತ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಆಡಿದರು ಮತ್ತು ಪರಿಸ್ಥಿತಿಯ ಉತ್ತಮ ಲಾಭ ಪಡೆದರು ಎಂದರು.
ಇಂಗ್ಲೆಂಡಿನ ಮಾಜಿ ನಾಯಕ ಅಲಸ್ಟೈರ್ ಕುಕ್ ಕೂಡ ಸ್ಟಾರ್ಕ್ ಸ್ಲೆಡ್ಜಿಂಗ್ ಮಾಡಿದ ಯಶಸ್ವಿಯನ್ನು ಹೊಗಳಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ ಜೈಸ್ವಾಲ್ ಅದ್ಭುತ ತಾಳ್ಮೆ ಮತ್ತು ಧೈರ್ಯವನ್ನು ತೋರಿಸಿದರು. ಯುವ ಬ್ಯಾಟ್ಸ್‌ಮನ್ ಅವರ ಮಾನಸಿಕ ಶಕ್ತಿಗಾಗಿ ಕುಕ್ ಶ್ಲಾಘಿಸಿದರು. 'ಒಂದು ನಿರ್ದಿಷ್ಟ ಸಮಯದಲ್ಲಿ ಜೈಸ್ವಾಲ್ ಇದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಜೈಸ್ವಾಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದಾಗ ಅವರು 100 ರನ್ ಗಳಿಸಿರಲಿಲ್ಲ. ಹೀಗಿದ್ದರೂ ನೀವು ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದೀರಿ ಎಂದು ಸ್ಟಾರ್ಕ್‌ಗೆ ಹೇಳಿದ್ದಾರೆ ಎಂದರೇ ಮೆಚ್ಚಲೆಬೇಕು ಎಂದರು.
'ನಾನು ಸ್ಟಾರ್ಕ್ ಅವರನ್ನು ಎದುರಿಸಿದ್ದೇನೆ. ಅವರು ಖಂಡಿತವಾಗಿಯೂ ನಿಧಾನವಾಗಿ ಬೌಲಿಂಗ್ ಮಾಡುವುದಿಲ್ಲ. ಅವರು ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದರೂ ನಾನು ಅವರಿಗೆ ತೊಂದರೆ ಕೊಡುವುದಿಲ್ಲ. ಆದರೆ ಜೈಸ್ವಾಲ್ ಎಷ್ಟು ಆತ್ಮವಿಶ್ವಾಸವನ್ನು ಹೊಂದಿದ್ದಾರೆಂದು ತೋರಿಸಿದರು. ನನ್ನ ಪ್ರಕಾರ ಅವರು ಅಗ್ರ ಕ್ರಮಾಂಕದಲ್ಲಿ 15 ಟೆಸ್ಟ್ ಪಂದ್ಯಗಳ ನಂತರ ಯಾವುದೇ ಭಾರತೀಯ ಆಟಗಾರರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಅವನು ಬ್ಯಾಟಿಂಗ್ ಮಾಡುವ ಕ್ರಮಾಂಕ ಅತ್ಯಂತ ಕಷ್ಟಕರವಾಗಿದೆ. ಬಹುಶಃ ನಾನು ಹೇಳುವುದನ್ನು ನೀವು ನಂಬುವುದಿಲ್ಲ. ಆದರೆ ಅವರ ಅಂಕಿಅಂಶಗಳು ಅವರು ಎಂತಹ ಶ್ರೇಷ್ಠ ಆಟಗಾರ ಎಂಬುದನ್ನು ತೋರಿಸುತ್ತದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ