
ಅಡಿಲೇಡ್(ಆಸ್ಟ್ರೇಲಿಯಾ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯುತ್ತಿದೆ. ಇದು ಡೇ ನೈಟ್ ಟೆಸ್ಟ್ ಆಗಿದ್ದು, ಪಿಂಕ್ ಚೆಂಡಿನೊಂದಿಗೆ ಆಡಲಾಗುತ್ತಿದೆ. ಮಿಚೆಲ್ ಸ್ಟಾರ್ಕ್ ಪಂದ್ಯದ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಎಲ್ ಬಿಡಬ್ಲ್ಯು ಔಟ್ ಮಾಡಿದರು. ಈ ಮೂಲಕ ಸ್ಟಾರ್ಕ್ ಪರ್ತ್‌ನಲ್ಲಿ ತಮಗಾದ ಸ್ಲೆಡ್ಜಿಂಗ್‌ಗೆ ಸೇಡು ತೀರಿಸಿಕೊಂಡಿದ್ದಾರೆ.
ಸ್ಟಾರ್ಕ್ ಮೊದಲ ಎಸೆತವನ್ನೆ ಲೆಗ್ ಸ್ಟಂಪ್ ಮೇಲೆ ಎಸೆದರು. ಚೆಂಡು ಲೆಗ್ ಸ್ವಿಂಗ್ ಆಗಿ ಜೈಸ್ವಾಲ್ ಪ್ಯಾಡ್‌ಗೆ ಬಡಿಯಿತು. ನಂತರ ಡಿಆರ್‌ಎಸ್ ತೆಗೆದುಕೊಳ್ಳುವ ಸಲುವಾಗಿ ನಾನ್‌ಸ್ಟ್ರೈಕ್ನಲ್ಲಿದ್ದ ಕೆಎಲ್ ರಾಹುಲ್‌ನೊಂದಿಗೆ ಚರ್ಚಿಸಿದರು. ಆದರೆ ಡಿಆರ್‌ಎಸ್ ಗೆ ರಾಹುಲ್ ನಿರಾಕರಿಸಿದರು. ಈ ಮೂಲಕ ಮೊದಲ ಎಸೆತದಲ್ಲೇ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಯಶಸ್ವಿ ಕೊನೆಯ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು.
ವಾಸ್ತವವಾಗಿ, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಯಶಸ್ವಿ ಅವರ ಶತಕದ ಸಮಯದಲ್ಲಿ ಸ್ಟಾರ್ಕ್‌ನನ್ನು ಸ್ಲೆಡ್ಡಿಂಗ್ ಮಾಡಿದ್ದರು. ಸ್ಟಾರ್ಕ್ ಯಶಸ್ವಿಯತ್ತ ಕಣ್ಣು ಹಾಯಿಸಿದಾಗ, ಯಶಸ್ವಿಯೂ ತಕ್ಕ ಉತ್ತರ ನೀಡಿದರು. ಆದರೆ, ಇಬ್ಬರ ಮಾತು ತಮಾಷೆಯಾಗಿತ್ತು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ, 19ನೇ ಓವರ್‌ನಲ್ಲಿ, ಸ್ಟಾರ್ಕ್ ಆಫ್ ಸ್ಟಂಪ್‌ನ ಹೊರಗೆ ಪೂರ್ಣ ಉದ್ದದ ಚೆಂಡನ್ನು ಬೌಲ್ ಮಾಡಿದರು. ಅದನ್ನು ಯಶಸ್ವಿ ಬೌಂಡರಿ ಸಿಡಿಸಿದರು. ಯಶಸ್ವಿಯನ್ನು ದಿಟ್ಟಿಸಿ ನೋಡಿದ ಸ್ಟಾರ್ಕ್ ಕೂಡ ಮುಗುಳ್ನಕ್ಕ. ನಂತರದ ಬಾಲ್‌ನಲ್ಲಿ ಯಶಸ್ವಿ ನೇರ ಶಾಟ್ ಆಡುವ ಮೂಲಕ ಅತ್ಯುತ್ತಮ ರಕ್ಷಣಾ ಪ್ರದರ್ಶನ ನೀಡಿದರು. ತಾನು ಹೆದರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸ್ಟಾರ್ಕ್‌ಗೆ ರವಾನಿಸಿದರು. ಇದಾದ ನಂತರವೂ, ಸ್ಟಾರ್ಕ್ ಅವರನ್ನು ದಿಟ್ಟಿಸಿ ನೋಡಿದಾಗ, ಯಶಸ್ವಿ ನೀವು ತುಂಬಾ ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದೀರಿ ಎಂದು ಹೇಳಿದ್ದರು.
ಆ ಘಟನೆ ಇಂದಿನ ಪಂದ್ಯದ ಮೇಲೆ ಹೆಚ್ಚು ಕುತೂಹಲ ಕೆರಳುವಂತೆ ಮಾಡಿತ್ತು. ಆದರೆ ಈ ಬಾರಿ ಜೈಸ್ವಾಲ್ ಎಡವಿದರು. ಪಂದ್ಯದ ಹಾಗೂ ಸ್ಟಾರ್ಕ್ ಎಸೆದ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕೌಟ್ ಆದರು. ಇನ್ನು ಜೈಸ್ವಾಲ್ ಔಟಾಗುತ್ತಿದ್ದಂತೆ ಸ್ಟಾರ್ಕ್ ಕುಹಕ ನಗುವಿನ ಮೂಲಕ ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಜಸ್ಟಿನ್ ಲ್ಯಾಂಗರ್, ಇಲ್ಲಿ ಪ್ರಮುಖ ಪಾಠವೆಂದರೆ ಎಷ್ಟೇ ಕಹಿ ಅನುಭವಿಸಿದರೂ ಬೌಲರ್‌ಗಳು ಯಾವಾಗಲೂ ಕೊನೆಗೆ ನಗು ಸಿಗುತ್ತದೆ ಎಂದು ಹೇಳಿದರು.
Advertisement