ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 180ರನ್ ಗಳಿಗೇ ಆಲೌಟ್ ಆಗಿದೆ.
ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಮಿಚೆಲ್ ಸ್ಟಾರ್ಕ್ ರ ವೇಗದ ದಾಳಿಗೆ ತುತ್ತಾಗಿ ಕೇವಲ 180 ರನ್ ಗೆ ಆಲೌಟ್ ಆಗಿದೆ.
ಭಾರತದ ಪರ ಕೆಎಲ್ ರಾಹುಲ್ 37, ಶುಭ್ ಮನ್ ಗಿಲ್ 31, ರಿಷಬ್ ಪಂತ್ 21, ಆರ್ ಅಶ್ವಿನ್ 22 ಮತ್ತು ನಿತೀಶ್ ರೆಡ್ಡಿ 42 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಆಟಗಾರರಿಂದಲೂ ಎರಡಂಕಿ ಮೊತ್ತ ಮೂಡಿಬರಲಿಲ್ಲ. ಕೊಹ್ಲಿ 7ರನ್ ಗೇ ಔಟಾಗಿ ನಿರಾಶೆ ಮೂಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರೋಹಿತ್ ಶರ್ಮಾ ಕೇವಲ 3 ರನ್ ಗೆ ಔಟ್ ಆಗಿದ್ದು ಭಾರತಕ್ಕೆ ಮುಳುವಾಯಿತು.
ಇನ್ನು ಆಸ್ಟ್ರೇಲಿಯಾ ಪರ ಕರಾರುವಕ್ಕಾದ ದಾಳಿ ನಡೆಸಿದ ವೇಗಿ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು. ಅಂತೆಯೇ ಅವರಿಗೆ ಉತ್ತಮ ಸಾಥ್ ನೀಡಿದ ಬೋಲಾಂಡ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.
Advertisement