
ಬಾಂಗ್ಲಾದೇಶ ಅಂಡರ್-19 ತಂಡ ACC ಪುರುಷರ ಅಂಡರ್-19 ಏಷ್ಯಾ ಕಪ್ 2024ರ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಭಾರತವನ್ನು 59 ರನ್‌ಗಳಿಂದ ಸೋಲಿಸಿತು.
ಪಂದ್ಯದ ವೇಳೆ ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಭಾರತ ತಂಡವು ಗೆಲುವಿನಿಂದ ಕೇವಲ ಒಂದು ವಿಕೆಟ್ ಇರುವಾಗ, ತಮೀಮ್ ಕ್ರೀಡಾಂಗಣದಲ್ಲಿದ್ದ ಬಾಂಗ್ಲಾದೇಶದ ಬೆಂಬಲಿಗರನ್ನು ಹುರಿದುಂಬಿಸಲು ಪ್ರೇರೇಪಿಸಿದರು. ಈ ವೇಳೆ ಬಾಂಗ್ಲಾ ಬೆಂಬಲಿಗರು 'ಅಲ್ಲಾಹು ಅಕ್ಬರ್' ಘೋಷಣೆಗಳನ್ನು ಕೂಗಿದ್ದು ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ತಮೀಮ್ ಅಭಿಮಾನಿಗಳನ್ನು 'ಅಲ್ಲಾಹು ಅಕ್ಬರ್' ಎಂದು ಕೂಗುವಂತೆ ಪ್ರೋತ್ಸಾಹಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಪರಿಗಣಿಸಿದ್ದರೆ ಮತ್ತೆ ಕೆಲವರು ಇದನ್ನು ತಮ್ಮ ಬೆಂಬಲಿಗರನ್ನು ತೊಡಗಿಸಿಕೊಳ್ಳಲು ನಾಯಕನ ತಂತ್ರವೆಂದು ಪರಿಗಣಿಸುತ್ತಾರೆ.
Advertisement