
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿರುವಂತೆಯೇ ಮಳೆಯಿಂದಾಗಿ ಇಡೀ ದಿನದಾಟ ಸ್ಥಗಿತವಾಗಿದೆ.
ಗಾಬಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ ಮಳೆ ಅಡ್ಡಿಪಡಿಸಿತು.
ಆಸ್ಟ್ರೇಲಿಯಾ ತಂಡ ಕೇವಲ 28 ರನ್ ಗಳಿಸಿದ್ದಾಗ ಆರಂಭವಾದ ಮಳೆ ಇಡೀ ದಿನ ಸುರಿದಿದ್ದು, ಹೀಗಾಗಿ ಮೊದಲ ದಿನದಾಟವನ್ನು ಅಂಪೈರ್ ಗಳು ಸ್ಥಗಿತಗೊಳಿಸಿದರು.
ಆಸ್ಟ್ರೇಲಿಯಾ 13. 2 ಓವರ್‌ಗಳಲ್ಲಿ 28 ರನ್‌ಗಳಿಸಿದ್ದು, ಖವಾಜ 19ರನ್ ಮತ್ತು ನಥನ್ 4 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಭಾರತ ತಂಡದಲ್ಲಿ ಬದಲಾವಣೆ
ಇನ್ನು ಇಂದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಹರ್ಷಿತ್ ರಾಣಾ ಅವರ ಬದಲಿಗೆ ಆಕಾಶ್ ದೀಪ್ ಹಾಗೂ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಕಣಕ್ಕೆ ಇಳಿದಿದ್ದಾರೆ. ಅಂತೆಯೇ ಆಸ್ಟ್ರೇಲಿಯಾ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಆಸ್ಟ್ರೇಲಿಯಾ ಬೋಲ್ಯಾಂಡ್ ಬದಲಿಗೆ ಹ್ಯಾಜಲ್‌ವುಡ್ ಅವರಿಗೆ ಅವಕಾಶ ಕಲ್ಪಿಸಿದೆ.
Advertisement