'ನನ್ನ ಹುಟ್ಟೂರು ಶ್ರೀರಾಮಪುರ.. ಶಿರಡಿ ಜೊತೆ ನಿಕಟ ಸಂಪರ್ಕವಿದೆ': ಪತ್ನಿ ಸಮೇತ ಸಾಯಿಬಾಬಾ ದರ್ಶನ ಪಡೆದ Zaheer Khan

ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಮೇತರಾಗಿ ಸಾಯಿಬಾಬಾ ದರ್ಶನ ಪಡೆದರು.
Zaheer Khan visits Shirdi Sai Baba Temple
ಶಿರಡಿ ಸಾಯಿಬಾಬಾ ದರ್ಶನ ಪಡೆದ ಜಹೀರ್ ಖಾನ್ ದಂಪತಿ
Updated on

ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿದ ಜಹೀರ್ ಖಾನ್ ಪತ್ನಿ ಸಾಗರಿಕಾ ಜೊತೆ ಶಿರಡಿಗೆ ಭೇಟಿ ಕೊಟ್ಟು ಸಾಯಿಬಾಬಾ ದರ್ಶನ ಪಡೆದರು.

ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಮೇತರಾಗಿ ಸಾಯಿಬಾಬಾ ದರ್ಶನ ಪಡೆದರು.

Zaheer Khan visits Shirdi Sai Baba Temple
Video: ಜೈಸ್ವಾಲ್ ರನೌಟ್ ಗೆ Virat Kohli ಕಾರಣ...; ಲೈವ್ ಡಿಬೇಟ್ ನಲ್ಲೇ ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಜಟಾಪಟಿ!

ಸಾಯಿಬಾಬಾ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಹೀರ್ ಖಾನ್, ಶಿರಡಿಗೂ ನನಗೂ ತುಂಬಾ ನಿಕಟ ಸಂಬಂಧವಿದೆ. ನನ್ನ ಹುಟ್ಟೂರು ಶ್ರೀರಾಮಪುರ. ಇದು ಶಿರಡಿಗೆ ತುಂಬಾ ಸಮೀಪದಲ್ಲೇ ಇದೆ. ಚಿಕ್ಕವಯಸ್ಸಿನಿಂದಲೂ ಶಿರಡಿಗೆ ನಾನು ಆಗಾಗ ಕ್ರಿಕೆಟ್ ಟೂರ್ನಿಮೆಂಟ್ ಗಳಿಗಾಗಿ ಬರುತ್ತಿದ್ದೆ. ಅಲ್ಲದೆ ಬಾಬಾ ಮಂದಿರಕ್ಕೂ ಆಗಮಿಸಿ ದರ್ಶನ ಪಡೆಯುತ್ತಿದ್ದೆ. ಹೀಗಾಗಿ ಬಾಬಾ ದರ್ಶನ ನನಗೇನೂ ಹೊಸದಲ್ಲ. ಈ ಬಾರಿ ಪತ್ನಿ ಸಾಗರಿಕಾ ಜೊತೆ ಬಂದಿದ್ದೇನೆ ಎಂದಿದ್ದಾರೆ.

ಅಲ್ಲದೆ ತಮ್ಮ ಪತ್ನಿ ಸಾಗರಿಕಾ ಸಾಯಿಬಾಬಾ ಅವರ ಭಕ್ತೆಯಾಗಿದ್ದು, ಬಾಬಾ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಆಕೆ ಕೂಡ ಸಾಕಷ್ಟು ಬಾರಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಬರುತ್ತಿರುತ್ತಾರೆ. ಈ ಬಾರಿ ನಾವಿಬ್ಬರೂ ಒಟ್ಟಿಗೆ ದರ್ಶನ ಪಡೆದೆವು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com