
ಮೆಲ್ಬೋರ್ನ್: ವೇಗಿ ಜಸ್ಪ್ರೀತ್ ಬುಮ್ರಾ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಭಾರತೀಯ ಮತ್ತು 20 ಸರಾಸರಿಯೊಂದಿಗೆ ಆ ಮೈಲಿಗಲ್ಲನ್ನು ತಲುಪಿದ ಮೊದಲ ಬೌಲರ್ ಎನಿಸಿಕೊಂಡರು.
ಭೋಜನದ ನಂತರದ ಅವಧಿಯಲ್ಲಿ ಟ್ರಾವಿಸ್ ಹೆಡ್ (1) ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು. ಟೆಸ್ಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾ ಅವರಿದ್ದು, ಇದೀಗ ಬುಮ್ರಾ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ ಮತ್ತು ಜಡೇಜಾ ಇಬ್ಬರೂ ತಮ್ಮ 44 ನೇ ಟೆಸ್ಟ್‌ನಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 12 ನೇ ಭಾರತೀಯ ಬೌಲರ್ ಆಗಿದ್ದಾರೆ. ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ 37ನೇ ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಭಾರತೀಯರಲ್ಲೊಬ್ಬರು.
ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿ ದಾಟಿದ ಎಲ್ಲ ಬೌಲರ್‌ಗಳ ಪೈಕಿ ಬುಮ್ರಾ 20 ರೊಳಗಿನ ಸರಾಸರಿ ಹೊಂದಿರುವ ಏಕೈಕ ಬೌಲರ್ ಆಗಿದ್ದಾರೆ. ಇದರಲ್ಲಿ ವೆಸ್ಟ್ ಇಂಡೀಸ್‌ನ ಕೆಲವು ವೇಗದ ಬೌಲರ್‌ಗಳಾದ ಮಾಲ್ಕಮ್ ಮಾರ್ಷಲ್ (20.94 ಸರಾಸರಿಯಲ್ಲಿ 376 ವಿಕೆಟ್‌ಗಳು), ಜೋಯಲ್ ಗಾರ್ನರ್ (20ಕ್ಕೆ 259 ವಿಕೆಟ್), ಕರ್ಟ್ಲಿ ಆಂಬ್ರೋಸ್ (20.99ಕ್ಕೆ 405 ವಿಕೆಟ್) ಹಾಗೂ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ (26.45ಕ್ಕೆ 704 ವಿಕೆಟ್) ಮತ್ತು ಗ್ಲೆನ್ ಮೆಕ್‌ಗ್ರಾತ್ (21.64ಕ್ಕೆ 563 ವಿಕೆಟ್) ಸೇರಿದ್ದಾರೆ.
ಪಾಕಿಸ್ತಾನದ ಯಾಸಿರ್ ಷಾ (33 ಟೆಸ್ಟ್‌ಗಳು) ಮತ್ತು ಆಸ್ಟ್ರೇಲಿಯಾದ ಕ್ಲಾರಿ ಗ್ರಿಮ್ಮೆಟ್ (36 ಟೆಸ್ಟ್‌ಗಳು) ನಂತರದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ವೇಗವಾಗಿ ಪೂರೈಸಿದ ಬೌಲರ್‌ಗಳ ಒಟ್ಟಾರೆ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ.
Advertisement