'ತುಂಬಾ ಬೇಸರ ಆಗ್ತಿದೆ..': 4ನೇ ಟೆಸ್ಟ್ ಸೋಲಿನ ಬಳಿಕ Rohit Sharma ಮಹತ್ವದ ನಿರ್ಧಾರ?

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, 'ನಮಗೆ ತುಂಬಾನೇ ಬೇಸರ ಆಗ್ತಿದೆ. ನಮ್ಮ ಉದ್ದೇಶ ಸೋಲುವುದು ಆಗಿರಲಿಲ್ಲ. ಕೊನೆವರೆಗೂ ಹೋರಾಟ ಮಾಡಬೇಕು ಅಂದುಕೊಂಡಿದ್ದೇವು. ಆದರೆ ಅದು ಸಾಧ್ಯವಾಗಲಿಲ್ಲ.
Rohit Sharma after Australia loss
ರೋಹಿತ್ ಶರ್ಮಾ
Updated on

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 184 ರನ್​ಗಳಿಂದ ಹೀನಾಯವಾಗಿ ಸೋತಿದ್ದು, ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತೀವ್ರ ಬೇಸರ ಹೊರಹಾಕಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, 'ನಮಗೆ ತುಂಬಾನೇ ಬೇಸರ ಆಗ್ತಿದೆ. ನಮ್ಮ ಉದ್ದೇಶ ಸೋಲುವುದು ಆಗಿರಲಿಲ್ಲ. ಕೊನೆವರೆಗೂ ಹೋರಾಟ ಮಾಡಬೇಕು ಅಂದುಕೊಂಡಿದ್ದೇವು. ಆದರೆ ಅದು ಸಾಧ್ಯವಾಗಲಿಲ್ಲ. ಐದು ದಿನದ ಟೆಸ್ಟ್ ಪಂದ್ಯದ ಕೊನೆಯ ಸೆಷನ್​​ನಲ್ಲಿ ಎಲ್ಲವನ್ನೂ ನಿರ್ಧರಿಸೋದು ತುಂಬಾನೇ ಕಷ್ಟ ಎಂದಿದ್ದಾರೆ.

ಇದೇ ವೇಳೆ ತಂಡದ ವೈಫಲ್ಯಗಳ ಕುರಿತು ಮಾತನಾಡಿದ ರೋಹಿತ್ ಶರ್ಮಾ, 'ಈ ಸೋಲಿನಲ್ಲಿ ಪಂದ್ಯದ ಒಟ್ಟಾರೆ ಅಂಶಗಳನ್ನು ಗಮನಿಸಬೇಕಾಗಿದೆ. ನಮಗೆ ಗೆಲುವಿನ ಅವಕಾಶ ಅಥವಾ ಉದ್ದೇಶಿತ ಟಾರ್ಗೆಟ್ ಇತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 90 ರನ್​ಗೆ 6 ವಿಕೆಟ್ ಕಳೆದುಕೊಂಡಾಗಲೇ ಹಿಡಿತ ಸಾಧಿಸಬಹುದಿತ್ತು. ಅಂಥಹ ಅವಕಾಶವನ್ನು ನಾವು ಕೈಚೆಲ್ಲಿದೆವು.

ಕೆಲವು ಸಂಗತಿಗಳು ತುಂಬಾನೇ ಕಷ್ಟಕರ ಅನ್ನೋದು ಗೊತ್ತು. ಕೇವಲ ಒಂದು ಘಟನೆಯಿಂದ ಸೋಲು, ಗೆಲುವು ನಿರ್ಧರಿಸೋದು ಕೂಡ ಕಷ್ಟವೇ. ನಾವು ಕಠಿಣ ಪರಿಶ್ರಮಕ್ಕೆ ಒತ್ತು ನೀಡುತ್ತೇವೆ. ಮೈದಾನದಿಂದ ವಾಪಸ್ ಹೋದಾಗ ಗೆಲುವಿಗಾಗಿ ಏನೆಲ್ಲ ಮಾಡಬೇಕು ಅನ್ನೋದನ್ನು ನಿರ್ಧರಿಸಿದ್ದೆವು. ಸಾಧ್ಯವಾದ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದ್ದೆವು ಎಂದರು.

Rohit Sharma after Australia loss
BGT 2025, 4th test: ಭಾರತಕ್ಕೆ 184 ರನ್ ಸೋಲು, ಆಸಿಸ್ 2-1 ಸರಣಿ ಮುನ್ನಡೆ

ಅಂತೆಯೇ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್​ನ ಕೊನೆಯ ಬ್ಯಾಟ್ಸ್​​ಮನ್​​ಗಳು ಉತ್ತಮವಾಗಿ ಆಡಿದ್ದು ತಂಡಕ್ಕೆ ಮುಳುವಾಯಿತು. ಅಂತಿಮ ದಿನದಲ್ಲಿ 340 ರನ್​ಗಳಿಸೋದು ಸುಲಭದ ಮಾತಲ್ಲ. ನಮ್ಮ ಗುರಿಗಾಗಿ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಕೊನೆಯ ಎರಡು ಸೆಷನ್​ಗಳಲ್ಲಿ ನಮಗೆ ವಿಕೆಟ್ ಇದ್ದರೆ ಸುಲಭವಾಗಿ ಗುರಿಯನ್ನು ಸಾಧಿಸಬಹುದಿತ್ತು. ಅವರು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು. ನಾವು ಏನು ಅಂದುಕೊಂಡಿದ್ದೆವೋ ಅದು ಆಗಲಿಲ್ಲ. ಆಟದಲ್ಲಿ ಗೆಲ್ಲಲು ತುಂಬಾನೇ ಮಾರ್ಗಗಳಿವೆ. ಆದರೆ ಸೋಲಲು ಹಾದಿಗಳು ಕಡಿಮೆ ಇವೆ ಎಂದರು.

ವೈಯುಕ್ತಿಕ ಮಟ್ಟದಲ್ಲೂ ಗಮನ ಹರಿಸಬೇಕಾದ ಅಂಶಗಳಿವೆ

ಇದೇ ವೇಳೆ ತಂಡದ ಸಾಮೂಹಿಕ ಸಮಸ್ಯೆಗಳ ಜೊತೆಗೆ ವೈಯಕ್ತಿಕ ಮಟ್ಟದಲ್ಲಿಯೂ ಗಮನಹರಿಸಬೇಕಾದ "ವಿಷಯಗಳು" ಇವೆ ಎಂದಿರುವ ರೋಹಿತ್ ಶರ್ಮಾ, 'ನಾನು ಇಂದು ನಿಂತಿರುವ ಸ್ಥಾನದಲ್ಲಿಯೇ ನಿಂತಿದ್ದೇನೆ. ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಯೋಚಿಸಲು ಏನೂ ಇಲ್ಲ. ನಿಸ್ಸಂಶಯವಾಗಿ, ಕೆಲವು ಫಲಿತಾಂಶಗಳು ನಮ್ಮ ಯೋಜಿಸಿದಂತೆ ಬರಲಿಲ್ಲ. ಹೌದು, ನಾಯಕನಾಗಿ ನಿರಾಶಾದಾಯಕವಾಗಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದ್ದು, ನಾವು ಉತ್ತಮ ಪ್ರದರ್ಶನ ನೀಡಿ ಆ ಪಂದ್ಯವನ್ನು ಗೆದ್ದರೆ ಆಗ ಸರಣಿ 2-2ರಲ್ಲಿ ಸಮವಾಗುತ್ತದೆ.

ಹೀಗಾದರೆ ನಿಜಕ್ಕೂ ಚೆನ್ನಾಗಿರುತ್ತದೆ. ಮುಂದಿನ ಪಂದ್ಯಕ್ಕೆ ಸಿದ್ಧರಾಗಲು ಸಾಕಷ್ಟು ಸಮಯವಿಲ್ಲ. ಆದರೆ ನಾವು ಅದನ್ನು ಬಿಟ್ಟುಕೊಡಬಾರದು ಮತ್ತು ನಾವು ಸಿಡ್ನಿಯಲ್ಲಿ ಬಂದಾಗ ಆ ಆವೇಗವನ್ನು ಮತ್ತೆ ನಮ್ಮ ಕಡೆಗೆ ಸರಿಸಲು ಪ್ರಯತ್ನಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಪ್ರಯತ್ನಿಸುತ್ತೇವೆ ಮತ್ತು ಖಚಿತಪಡಿಸಿಕೊಳ್ಳುತ್ತೇವೆ. ಸಿಡ್ನಿಯಲ್ಲಿ ಮತ್ತೊಮ್ಮೆ, ನಮಗೆ ಅಲ್ಲಿಗೆ ಬಂದು ತಂಡವಾಗಿ ನಮಗೆ ಸಾಧ್ಯವಾದದ್ದನ್ನು ಮಾಡಲು ಮತ್ತು ಆ ಆಟವನ್ನು ಚೆನ್ನಾಗಿ ಆಡಲು ಪ್ರಯತ್ನಿಸಲು ಅವಕಾಶವಿದೆ ಎಂದು ರೋಹಿತ್ ಶರ್ಮಾ ಹೇಳಿದರು.

Rohit Sharma after Australia loss
BGT 2025: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿರುದ್ಧ ಮುಗಿಬಿದ್ದ ಫ್ಯಾನ್ಸ್!

ನಿತೀಶ್ ಕುಮಾರ್ ರೆಡ್ಡಿಗೆ ಉತ್ತಮ ಭವಿಷ್ಯವಿದೆ

ನಿತಿಶ್ ಕುಮಾರ್ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅವರಿಗೆ ಇಲ್ಲಿನ ಪರಿಸ್ಥಿತಿ ತುಂಬಾ ಕಠಿಣ ಆಗಬಹುದು. ಆದರೂ ಅವರಲ್ಲಿರುವ ಸ್ಕಿಲ್​​ನಿಂದಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರಿಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಅವರು ತಮ್ಮ ಸ್ಕಿಲ್ ಮೂಲಕ ಯಶಸ್ವಿ ಕಾಣುತ್ತಾರೆ. ಅವರಲ್ಲಿರುವ ಕ್ವಾಲಿಟಿ ನಮಗೆ ಗೊತ್ತು. ಅವರನ್ನು ತುಂಬಾ ದಿನಗಳವರೆಗೆ ಕ್ರಿಕೆಟ್​​​ನಲ್ಲಿ ನೋಡುತ್ತೇವೆ ಎಂದು ಹೇಳಿದ್ದಾರೆ.

ಬುಮ್ರಾ ಮೇಲೆ ಹೊರೆ

ಉಪ ನಾಯಕ ಜಸ್ ಪ್ರೀತ್ ಬುಮ್ರಾ ಕುರಿತು ಮಾತನಾಡಿದ ರೋಹಿತ್ ಶರ್ಮಾ, 'ಬುಮ್ರಾ ನಾಲ್ಕು ಟೆಸ್ಟ್‌ಗಳಲ್ಲಿ 140 ಕ್ಕೂ ಹೆಚ್ಚು ಓವರ್‌ಗಳನ್ನು (141. 2 ಓವರ್‌ಗಳು) ಬೌಲಿಂಗ್ ಮಾಡಿದ್ದಾರೆ. ಅವರು ಆದರ್ಶಪ್ರಾಯವಾಗಿ ಮಾಡಬೇಕಾದುದಕ್ಕಿಂತ ಹೆಚ್ಚಿನದನ್ನು ಮಾಡುತ್ತಿದ್ದಾರೆ ಎಂದು ಒಪ್ಪಿಕೊಳ್ಳಲೇಬೇಕು. ನಿಜ ಹೇಳಬೇಕೆಂದರೆ, ಅವರು ಬಹಳಷ್ಟು ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ.

ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಮತ್ತೊಮ್ಮೆ, ನಾವು ಆಡುವ ಪ್ರತಿಯೊಂದು ಟೆಸ್ಟ್ ಪಂದ್ಯದಲ್ಲೂ, ಎಲ್ಲಾ ಬೌಲರ್‌ಗಳ ಕೆಲಸದ ಹೊರೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ. ಯಾರಾದರೂ ಉತ್ತಮ ಫಾರ್ಮ್‌ನಲ್ಲಿದ್ದರೆ, ನೀವು ಸಾಧ್ಯವಾದಷ್ಟು ಆ ಫಾರ್ಮ್ ಅನ್ನು ಗರಿಷ್ಠಗೊಳಿಸಲು ಪ್ರಯತ್ನಿಸಲು ಬಯಸುತ್ತೀರಿ ಮತ್ತು ನಾವು ಬುಮ್ರಾ ಅವರೊಂದಿಗೆ ಮಾಡಲು ಪ್ರಯತ್ನಿಸುತ್ತಿರುವುದು ಅದನ್ನೇ ಎಂದು ರೋಹಿತ್ ಶರ್ಮಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com