ಭಾರತ -ಇಂಗ್ಲೆಂಡ್ 2ನೇ ಟೆಸ್ಟ್: ಬುಮ್ರಾ ಅಬ್ಬರ, ಆಂಗ್ಲರು ತತ್ತರ, ಟೀಂ ಇಂಡಿಯಾಗೆ 171 ರನ್ ಮುನ್ನಡೆ!

ಭಾರತ vs ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ವಿಶಾಖಪಟ್ಟಣಂನ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ಶನಿವಾರ ಪಂದ್ಯದ ಎರಡನೇ ದಿನವಾಗಿದ್ದು, ಇಂಗ್ಲೆಂಡ್ ಗೆ ಹಿನ್ನಡೆಯಾಗಿದೆ.
ಟೀಂ ಇಂಡಿಯಾ ತಂಡ
ಟೀಂ ಇಂಡಿಯಾ ತಂಡ

ವಿಶಾಖಪಟ್ಟಣಂ: ಭಾರತ vs ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ವಿಶಾಖಪಟ್ಟಣಂನ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ಶನಿವಾರ ಪಂದ್ಯದ ಎರಡನೇ ದಿನವಾಗಿದ್ದು, ಇಂಗ್ಲೆಂಡ್ ಗೆ ಹಿನ್ನಡೆಯಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಂಗ್ಲರು 253 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ 171 ರನ್ ಗಳ ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದ ಅಂತ್ಯದ ವೇಳೆಗೆ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಅಜೇಯ 15 ರನ್ ಮತ್ತು ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿ ಅಜೇಯರಾಗಿದ್ದಾರೆ. ಇದಕ್ಕೂ ಮೊದಲು ಭಾರತ ನೀಡಿದ 396 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 253 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಭಾರತ 143 ರನ್‌ಗಳ ಮುನ್ನಡೆ ಸಾಧಿಸಿತ್ತು.

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಮಾಡಿ 45 ರನ್ ನೀಡಿ 6 ವಿಕೆಟ್ ಪಡೆದರು. ಕುಲದೀಪ್ ಯಾದವ್ ಮೂರು ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜಾಕ್ ಕ್ರಾಲಿ (76) ಗರಿಷ್ಠ ರನ್ ಗಳಿಸಿದರು. ನಾಯಕ ಬೆನ್ ಸ್ಟೋಕ್ಸ್ (47) ಅರ್ಧಶತಕ ವಂಚಿತರಾದರು.

ಚಹಾ ವಿರಾಮದವರೆಗೆ ಇಂಗ್ಲೆಂಡ್‌ನ ಸ್ಕೋರ್ 155/4 ಪೇರಿಸಿತ್ತು. ಕೊನೆಯ ಅವಧಿಯಲ್ಲಿ ಭಾರತ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರವಾಸಿ ತಂಡದ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿತು. ಅದೇ ಹೊತ್ತಿಗೆ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿತ್ತು. ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಇಂಗ್ಲೆಂಡ್‌ಗೆ ಆಕ್ರಮಣಕಾರಿ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 59 ರನ್ ಪೇರಿಸಿದ್ದರು. ಈ ಜೊತೆಯಾಟವನ್ನು ಕುಲದೀಪ್ ಯಾದವ್ ಮುರಿದರು. 

ಇಂಗ್ಲೆಂಡ್ 20ನೇ ಓವರ್‌ನಲ್ಲಿ 100 ರನ್‌ಗಳ ಗಡಿ ದಾಟಿತು. ಕ್ರಾಲಿಯನ್ನು ಔಟ್ ಮಾಡುವ ಮೂಲಕ ಅಕ್ಷರ್ ಪಟೇಲ್ ಭಾರತಕ್ಕೆ ಎರಡನೇ ಯಶಸ್ಸನ್ನು ನೀಡಿದರು. ಬುಮ್ರಾ 5 ರನ್‌ಗಳಿಸಿದ್ದ ರೂಟ್ ಮತ್ತು 23 ರನ್ ಗಳಿಸಿದ್ದ ಒಲ್ಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಎರಡು ದೊಡ್ಡ ಹೊಡೆತಗಳನ್ನು ನೀಡಿದರು. ಜಾನಿ ಬೈರ್‌ಸ್ಟೋವ್ 25 ರನ್ ಮತ್ತು ಟಾಮ್ ಹಾರ್ಟ್ಲಿ 21 ರನ್ ಕೊಡುಗೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com