2ನೇ ಟೆಸ್ಟ್: 2ನೇ ಇನ್ನಿಂಗ್ಸ್ ನಲ್ಲಿ ಭಾರತ 255ರನ್ ಗಳಿಗೆ ಆಲೌಟ್, ಇಂಗ್ಲೆಂಡ್ ಗೆ ಗೆಲ್ಲಲು 399 ರನ್ ಗಳ ಗುರಿ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 255ರನ್ ಗಳಿಗೆ ಸರ್ವಪತನ ಕಂಡಿದ್ದು, ಆ ಮೂಲಕ 143 ರನ್ ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್ ಗೆ ಗೆಲ್ಲಲು 399ರನ್ ಗಳ ಬೃಹತ್ ಗುರಿ ನೀಡಿದೆ.
ಭಾರತ ಆಲೌಟ್
ಭಾರತ ಆಲೌಟ್
Updated on

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 255ರನ್ ಗಳಿಗೆ ಸರ್ವಪತನ ಕಂಡಿದ್ದು, ಆ ಮೂಲಕ ಇಂಗ್ಲೆಂಡ್ ಗೆ ಗೆಲ್ಲಲು 399ರನ್ ಗಳ ಬೃಹತ್ ಗುರಿ ನೀಡಿದೆ.

2ನೇ ಇನ್ನಿಂಗ್ಸ್ ನಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನ ಸಾಧಾರಣವಾಗಿತ್ತು. ಶುಭ್ ಮನ್ ಗಿಲ್ ಶತಕ, ಅಕ್ಸರ್ ಪಟೇಲ್ 45 ರನ್ ಗಳಿಸಿದ್ದು ಹೊರತುಪಡಿಸಿದರೆ, ಉಳಿದಾವ ಆಟಗಾರರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಮೊದಲ ಇನ್ನಿಂಗ್ಸ್ ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 17ರನ್ ಗಳಿಸಿ ನಿರಾಶೆ ಮೂಡಿಸಿದರು. ನಾಯಕ ರೋಹಿತ್ ಶರ್ಮಾ 13ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ 29ರನ್ ಗಳಿಸಿ ನಿರಾಶೆ ಮೂಡಿಸಿದರು.

ರಜತ್ ಪಾಟೀದಾರ್ 9ರನ್, ಶ್ರೀಕರ್ ಭರತ್ 6ರನ್, ಕುಲದೀಪ್ ಯಾದವ್ ಮತ್ತು ಬುಮ್ರಾ ಶೂನ್ಯಕ್ಕೆ ಔಟಾದರು. ಅಂತಿಮ ಹಂತದಲ್ಲಿ ಆರ್ ಅಶ್ವಿನ್ 29ರನ್ ಗಳನ್ನಷ್ಟೇ ಗಳಿಸಲು ಶಕ್ತರಾದರು. ಅಂತಿಮವಾಗಿ ಭಾರತ 255ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಮೊದಲ ಇನ್ನಿಂಗ್ಸ್ ನ ಮುನ್ನಡೆಯೊಂದಿಗೆ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 399 ರನ್ ಗಳ ಗುರಿ ನೀಡಿದೆ.

ಇಂಗ್ಲೆಂಡ್ ಪರ ಟಾಮ್ ಹ್ಯಾರ್ಟ್ಲಿ 4 ವಿಕೆಟ್ ಕಬಳಿಸಿದರೆ, ರೆಹಾನ್ ಅಹ್ಮದ್ 3 ವಿಕೆಟ್, ಜೇಮ್ಸ್ ಆ್ಯಂಡರ್ಸೆನ್ 2 ಮತ್ತು ಶೊಯೆಬ್ ಬಷೀರ್ 1 ವಿಕೆಟ್ ಪಡೆದರು.

ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೇ 12 ರನ್ ಗಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com