ರಣಜಿ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಕುಲ್ವಂತ್: ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ದಾಖಲೆ, ವಿಡಿಯೋ!

ರಣಜಿ ಟ್ರೋಫಿಯಲ್ಲಿ ಅಭಿಮಾನಿಗಳು ಪ್ರತಿದಿನ ರೋಚಕ ಪಂದ್ಯಗಳನ್ನು ನೋಡುತ್ತಿದ್ದಾರೆ. ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಬರೋಡಾ ತಂಡವನ್ನು ಇನಿಂಗ್ಸ್ ಮತ್ತು 52 ರನ್‌ಗಳಿಂದ ಮಣಿಸಿದೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಮುಂಬೈ: ರಣಜಿ ಟ್ರೋಫಿಯಲ್ಲಿ ಅಭಿಮಾನಿಗಳು ಪ್ರತಿದಿನ ರೋಚಕ ಪಂದ್ಯಗಳನ್ನು ನೋಡುತ್ತಿದ್ದಾರೆ. ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಬರೋಡಾ ತಂಡವನ್ನು ಇನಿಂಗ್ಸ್ ಮತ್ತು 52 ರನ್‌ಗಳಿಂದ ಮಣಿಸಿದೆ. 

ಈ ಪಂದ್ಯದಲ್ಲಿ ಮಧ್ಯಪ್ರದೇಶದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಮತ್ತೊಂದೆಡೆ, ಬರೋಡಾದ ಯಾವುದೇ ಸ್ಟಾರ್ ಆಟಗಾರರು ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಮಧ್ಯಪ್ರದೇಶದ ವೇಗದ ಬೌಲರ್ ಕುಲ್ವಂತ್ ಖೆಜ್ರೋಲಿಯಾ ಅವರು ಬರೋಡಾ ವಿರುದ್ಧ ಉತ್ತಮ ಬೌಲಿಂಗ್ ದಾಳಿ ನೀಡಿದರು. ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 2 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಅತ್ಯುತ್ತಮ ಪ್ರದರ್ಶನದ ಮೂಲಕ ದಾಖಲೆ ಬರೆದಿದ್ದಾರೆ. ಬರೋಡಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇಲ್ಲಿಗೆ ನಿಲ್ಲದೆ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿ ಮಧ್ಯಪ್ರದೇಶ ಪರ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಈ ದಾಖಲೆ ಬರೆದ ಮೂರನೇ ಬೌಲರ್
ಬರೋಡಾದ ಎರಡನೇ ಇನಿಂಗ್ಸ್‌ನ 95ನೇ ಓವರ್‌ನ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಕುಲವಂತ್ ಖೆಜ್ರೋಲಿಯಾ ಅವರು ಶಾಶ್ವತ್ ರಾವತ್, ಮಹೇಶ್ ಪಿಥಿಯಾ, ಭಾರ್ಗವ್ ಭಟ್ ಮತ್ತು ಆಕಾಶ್ ಸಿಂಗ್ ಅವರ ವಿಕೆಟ್ ಪಡೆದರು. ನಂತರ ಮಧ್ಯಪ್ರದೇಶ ಬರೋಡಾಗೆ ಫಾಲೋ-ಆನ್ ನೀಡಿತು. ರಣಜಿ ಟ್ರೋಫಿ ಇತಿಹಾಸದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದೆಹಲಿಯ ಶಂಕರ್ ಸೈನಿ ಮತ್ತು ಜಮ್ಮು ಕಾಶ್ಮೀರದ ಮೊಹಮ್ಮದ್ ಮುಧಾಸಿರ್ ಈ ಸಾಧನೆ ಮಾಡಿದ್ದರು. ಇದಲ್ಲದೇ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಕುಲ್ವಂತ್ ಪಾತ್ರರಾಗಿದ್ದಾರೆ.

ರಣಜಿ ಟ್ರೋಫಿಯಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಬೌಲರ್‌ಗಳು:
* ಶಂಕರ್ ಸೈನಿ - (ದೆಹಲಿ ವರ್ಸಸ್ ಹಿಮಾಚಲ ಪ್ರದೇಶ), 1988
* ಮೊಹಮ್ಮದ್ ಮುಧಾಸಿರ್ - (ಜಮ್ಮು ಕಾಶ್ಮೀರ ವರ್ಸಸ್ ರಾಜಸ್ಥಾನ), 2018
* ಕುಲ್ವಂತ್ ಖೆಜ್ರೋಲಿಯಾ - (ಮಧ್ಯಪ್ರದೇಶ ವರ್ಸಸ್ ಬರೋಡಾ), 2024

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com