4ನೇ ಟೆಸ್ಟ್: 2ನೇ ದಿನದಾಟ ಅಂತ್ಯ, ಇಂಗ್ಲೆಂಡ್ ಎದುರು ಭಾರತಕ್ಕೆ 134 ರನ್ ಹಿನ್ನಡೆ

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 7 ವಿಕೆಟ್ ನಷ್ಟಕ್ಕೆ 219ರನ್ ಗಳಿಸಿ ಇನ್ನೂ 134 ರನ್ ಗಳ ಹಿನ್ನಡೆಯಲ್ಲಿದೆ.
4ನೇ ಟೆಸ್ಟ್ ಪಂದ್ಯ
4ನೇ ಟೆಸ್ಟ್ ಪಂದ್ಯBCCI

ರಾಂಚಿ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 7 ವಿಕೆಟ್ ನಷ್ಟಕ್ಕೆ 219ರನ್ ಗಳಿಸಿ ಇನ್ನೂ 134 ರನ್ ಗಳ ಹಿನ್ನಡೆಯಲ್ಲಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲೌಟ್ ಆಗಿತ್ತು. ಈ ಸವಾಲನ್ನು ಬೆನ್ನು ಹತ್ತಿರುವ ಭಾರತ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಭಾರತದ ಪರ ಆರಂಭಿಕ ಆಟಗಾರ ಜೈಸ್ವಾಲ್ (73 ರನ್), ಶುಭ್ ಮನ್ ಗಿಲ್ (38ರನ್) ಗಳಿಸಿ ಆಸರೆಯಾದರು. ಆದರೆ ನಾಯಕ ರೋಹಿತ್ ಶರ್ಮಾ 2ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ರಜತ್ ಪಾಟಿದಾರ್ 17ರನ್ ಗಳಿಸಿ ಶೊಯೆಬ್ ಬಷೀರ್ ಗೆ ವಿಕೆಟ್ ಒಪ್ಪಸಿದರೆ, 12 ರನ್ ಗಳಿಸಿದ್ದ ರವೀಂದ್ರ ಜಡೇಜಾ ಕೂಡ ಅವರದ್ದೇ ಬೌಲಿಂಗ್ ನಲ್ಲಿ ನಿರ್ಗಮಿಸಿದರು.

4ನೇ ಟೆಸ್ಟ್ ಪಂದ್ಯ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!

ಈ ಹಿಂದಿನ ಟೆಸ್ಟ್ ನಲ್ಲಿ ಪದಾರ್ಪಣೆ ಮಾಡಿ ಮಿಂಚಿದ್ದ ಸರ್ಫರಾಜ್ ಖಾನ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿನದಂತ್ಯದ ವೇಳೆ ಬ್ಯಾಟಿಂಗ್ ಗೆ ಇಳಿದ ಆರ್ ಅಶ್ವಿನ್ ಕೂಡ 1 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಧ್ರುವ್ ಜುರೆಲ್ (ಅಜೇಯ 30 ರನ್) ಮತ್ತು ಕುಲದೀಪ್ ಯಾದವ್ (ಅಜೇಯ 17 ರನ್)ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ದಿನದಂತ್ಯಕ್ಕೆ ಭಾರತ 7 ವಿಕೆಟ್ ನಷ್ಟಕ್ಕೆ 219ರನ್ ಗಳಿಸಿದ್ದು, ಇನ್ನೂ 134 ರನ್ ಗಳ ಹಿನ್ನಡೆಯಲ್ಲಿದೆ. ಹೀಗಾಗಿ ನಾಳೆ ಧ್ರುವ್ ಜುರೆಲ್ ಮತ್ತು ಕುಲದೀಪ್ ಯಾದವ್ ಬ್ಯಾಟಿಂಗ್ ಭಾರತ ತಂಡಕ್ಕೆ ಪ್ರಮುಖವಾಗಲಿದೆ.

ಇನ್ನು ಇಂಗ್ಲೆಂಡ್ ಪರ ಶೊಯೆಬ್ ಬಷೀರ್ 4 ವಿಕೆಟ್ ಕಬಳಿಸಿದರೆ, ಟಾಮ್ ಹಾರ್ಟ್ಲಿ 2 ಮತ್ತು ಜೇಮ್ಸ್ ಆ್ಯಂಡರ್ಸನ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com