4ನೇ ಟೆಸ್ಟ್: ಅಶ್ವಿನ್ ಗೆ 5 ವಿಕೆಟ್: ಇಂಗ್ಲೆಂಡ್ ಸರ್ವಪತನ, ಭಾರತಕ್ಕೆ ಗೆಲ್ಲಲು ಬೇಕಿದೆ 152 ರನ್!

ಟೀಂ ಇಂಡಿಯಾ ಗೆಲುವಿಗೆ ಇಂಗ್ಲೆಂಡ್ 192 ರನ್‌ಗಳ ಗುರಿ ನೀಡಿತ್ತು. ನಂತರ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ನಾಲ್ಕನೇ ದಿನ ಭಾರತ ಗೆಲ್ಲಲು ಇನ್ನೂ 152 ರನ್ ಗಳಿಸಬೇಕಿದ್ದು ಭಾರತದ ಕೈಯಲ್ಲಿ 10 ವಿಕೆಟ್‌ಗಳಿವೆ.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದ ಮೂರನೇ ದಿನದಾಟ ಅಂತ್ಯಗೊಂಡಿದೆ. ಮೂರು ದಿನಗಳಲ್ಲಿ ಪಂದ್ಯದ ಮೂರು ಇನ್ನಿಂಗ್ಸ್ ಮುಗಿದಿದ್ದು, ಪಂದ್ಯದ ಕೊನೆಯ ಇನಿಂಗ್ಸ್ ಆರಂಭಗೊಂಡಿದೆ.

ಟೀಂ ಇಂಡಿಯಾ ಗೆಲುವಿಗೆ ಇಂಗ್ಲೆಂಡ್ 192 ರನ್‌ಗಳ ಗುರಿ ನೀಡಿತ್ತು. ನಂತರ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ನಾಲ್ಕನೇ ದಿನ ಭಾರತ ಗೆಲ್ಲಲು ಇನ್ನೂ 152 ರನ್ ಗಳಿಸಬೇಕಿದ್ದು ಭಾರತದ ಕೈಯಲ್ಲಿ 10 ವಿಕೆಟ್‌ಗಳಿವೆ.

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್ ನಲ್ಲಿ 353 ರನ್‌ ಪೇರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಮೂರನೇ ದಿನ 307 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ್ದು 145 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತಕ್ಕೆ ಗೆಲುವಿಗೆ 192 ರನ್‌ಗಳ ಗುರಿ ಪಡೆದಿದ್ದು, ಭಾರತಕ್ಕೆ ಉತ್ತಮ ಆರಂಭ ಸಿಕ್ಕಿದೆ. ರೋಹಿತ್ ಶರ್ಮಾ 24 ರನ್ ಮತ್ತು ಯಶಸ್ವಿ ಜೈಸ್ವಾಲ್ 16 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇಲ್ಲಿಂದ ಇಂಗ್ಲೆಂಡ್ ಗೆಲ್ಲುವುದು ಕಷ್ಟವಾಗಬಹುದು.

ಟೀಂ ಇಂಡಿಯಾ ಆಟಗಾರರು
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್ ಗಳಿಸಿದೆ. ಜೋ ರೂಟ್ ಪ್ರಬಲ ಶತಕ ಗಳಿಸಿದ್ದರು. ಭಾರತದ ಪರ ರವೀಂದ್ರ ಜಡೇಜಾ 4, ಆಕಾಶ್ ದೀಪ್ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಇದಾದ ಬಳಿಕ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ 307 ರನ್ ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಇಂಗ್ಲೆಂಡ್ 46 ರನ್ ಗಳ ಮುನ್ನಡೆ ಪಡೆಯಿತು.

ಭಾರತ ಪರ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಪರ ಶೋಯೆಬ್ ಬಶೀರ್ ಐದು ವಿಕೆಟ್ ಪಡೆದರು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 145 ರನ್‌ಗಳಿಗೆ ಕುಸಿದಿತ್ತು. ಈ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಐದು ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com