RCB vs UPW; WPL ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಶಾ: ಆರ್‌ಸಿಬಿಗೆ ರೋಚಕ ಜಯ

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಬೌಲರ್ ಆಶಾ ಶೋಬನಾ ಜಾಯ್ ಹೊಸ ದಾಖಲೆ ಬರೆದಿದ್ದಾರೆ.
ಆಶಾ ಶೋಬನಾ ಜಾಯ್
ಆಶಾ ಶೋಬನಾ ಜಾಯ್

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಬೌಲರ್ ಆಶಾ ಶೋಬನಾ ಜಾಯ್ ಹೊಸ ದಾಖಲೆ ಬರೆದಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಎರಡನೇ ಆವೃತ್ತಿಯ ಯುಪಿ ವಾರಿಯರ್ಸ್ ಎದುರಿನ ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಆಶಾ ಡಬ್ಲ್ಯುಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

ಆಶಾ ಶೋಬನಾ ಅವರ ಅತ್ಯುತ್ತಮ ಬೌಲಿಂಗ್ ಸಹಾಯದೊಂದಿಗೆ ಆರ್‌ಸಿಬಿ ಎರಡು ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಆಶಾ ಶೋಬನಾ ಜಾಯ್
ಆಶಾ ಶೋಬನಾ ಜಾಯ್

ಮೊದಲಿಗೆ ಟಾಸ್ ಗೆದ್ದ ಯುಪಿ ವಾರಿಯರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮೇಘನಾ ಹಾಗೂ ರಿಚಾ ಘೋಷ್ ಅವರ ಅತ್ಯುತ್ತಮ ಜೊತೆಯಾಟ ತಂಡಕ್ಕೆ ಉತ್ತಮ ರನ್ ಕಲೆಹಾಕುವಲ್ಲಿ ನೆರವಾಯಿತು.

158 ರನ್‌ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ತಂಡಕ್ಕೆ ಆಶಾ ಶೋಬನಾ ಆಘಾತ ನೀಡಿದರು. ಗೆಲುವಿನತ್ತ ಸಾಗುತ್ತಿದ್ದ ಯುಪಿ ವಾರಿಯರ್ಸ್ ತಂಡಕ್ಕೆ 17ನೇ ಓವರ್‌ನಲ್ಲಿ ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್ ಮತ್ತು ಕಿರಣ್ ನವಗಿರೆ ಅವರ ವಿಕೆಟ್ ಕಿತ್ತ ಆಶಾ, ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು ಆಶಾ ಕನ್ನಡತಿ ವೃಂದಾ ದಿನೇಶ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಅವರ ವಿಕೆಟ್ ಕಿತ್ತಿದ್ದರು.

ಆಶಾ ಶೋಬನಾ ಜಾಯ್
ಐಪಿಎಲ್ 2024: ಮಾರ್ಚ್ 22ಕ್ಕೆ ಚೆನ್ನೈನಲ್ಲಿ CSK vs RCB ನಡುವೆ ಉದ್ಘಾಟನಾ ಪಂದ್ಯ!

ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೊದಲ ಐದು ವಿಕೆಟ್ ಪಡೆದ ದಾಖಲೆ ಸದ್ಯ ಯುಎಸ್‌ಎ ವೇಗಿ ತಾರಾ ನಾರ್ರಿಸ್ ಅವರ ಹೆಸರಿನಲ್ಲಿದೆ. ಡಬ್ಲ್ಯುಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ತಾರಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೇ ಈ ಸಾಧನೆ ಮಾಡಿದ್ದರು.

ಆಶಾ ಶೋಬನಾ ದೇಸಿಯ ಕ್ರಿಕೆಟ್‌ನಲ್ಲಿ ಕೇರಳ, ರೈಲ್ವೇಸ್ ಮತ್ತು ಪುದುಚೇರಿ ತಂಡವನ್ನು ಪ್ರತಿನಿಧಿಸಿದ್ದಾರೆ. ಡಬ್ಲ್ಯುಪಿಎಲ್ ಮೊದಲ ಆವೃತ್ತಿಯಲ್ಲಿ ಅವರು ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com