4ನೇ ಟೆಸ್ಟ್ ನಲ್ಲಿ ಗೆಲುವು: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭಾರತದ 2ನೇ ಸ್ಥಾನ ಮತ್ತಷ್ಟು ಗಟ್ಟಿ!

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭಾರತದ 2ನೇ ಸ್ಥಾನ ಮತ್ತಷ್ಟು ಗಟ್ಟಿಯಾಗಿದೆ.
ಭಾರತ ತಂಡ
ಭಾರತ ತಂಡ

ನವದೆಹಲಿ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭಾರತದ 2ನೇ ಸ್ಥಾನ ಮತ್ತಷ್ಟು ಗಟ್ಟಿಯಾಗಿದೆ.

ಇಂದು ರಾಂಚಿಯಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಗಳಿಂದ ಆಂಗ್ಲರನ್ನು ಮಣಿಸಿದೆ. ಆ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಭಾರತ ತಂಡ
4ನೇ ಟೆಸ್ಟ್: ಐದು ವಿಕೆಟ್ ಗಳಿಂದ ಇಂಗ್ಲೆಂಡ್ ಮಣಿಸಿ, ಸರಣಿ ಗೆದ್ದ ಭಾರತ!

ಸರಣಿ ಜಯ ಮಾತ್ರವಲ್ಲದೇ ಈ ಗೆಲುವಿನ ಮೂಲಕ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲೂ ತನ್ನ 2ನೇ ಸ್ಥಾನವನ್ನು ಮತ್ತಷ್ಟು ಗಟ್ಟಿಗಳಿಸಿಕೊಂಡಿದೆ. ಭಾರತ ಒಟ್ಟು 8 ಪಂದ್ಯಗಳನ್ನಾಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಜಯ ಸಾಧಿಸಿ ಎರಡರಲ್ಲಿ ಸೋಲು ಕಂಡಿದೆ. 1 ಪಂದ್ಯ ಡ್ರಾ ಆಗಿದೆ. ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ 62 ಅಂಕಗಳನ್ನು ಗಳಿಸಿಕೊಂಡಿದೆ. ಅಂತೆಯೇ ತನ್ನ ಗೆಲುವಿನ ಶೇಕಡಾವಾರುವನ್ನು 64.58ಕ್ಕೆ ಏರಿಸಿಕೊಂಡು 2ನೇ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ.

ಭಾರತ ತಂಡ
ರಣಜಿ ಟ್ರೋಫಿ: ಕ್ರಿಕೆಟ್ ನಲ್ಲೂ ರಾಜಕೀಯ, ನಾಯಕತ್ವ ತೊರೆಯಲು ಒತ್ತಡ.. ಆಂಧ್ರದ ಪರ ಇನ್ನೆಂದೂ ಆಡಲ್ಲ: ಹನುಮ ವಿಹಾರಿ ಆಕ್ರೋಶ!

ಇನ್ನು ಈ ಪಟ್ಟಿಯಲ್ಲಿ ಶೇ.75.00 ಗೆಲುವಿನ ಶೇಕಡಾವಾರು ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಶೇ.55.00 ಗೆಲುವಿನ ಶೇಕಡಾವಾರು ಹೊಂದಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com