1ನೇ ಟಿ20: ಶಿವಂ ದುಬೆ ಅಜೇಯ ಅರ್ಧಶತಕ; ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ

ಅಫ್ಘಾನಿಸ್ತಾನ ವಿರುದ್ಧ ಆರಂಭವಾಗಿರುವ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.
ಆಫ್ಘಾನ್-ಭಾರತ ತಂಡ
ಆಫ್ಘಾನ್-ಭಾರತ ತಂಡ

ಮೊಹಾಲಿ: ಅಫ್ಘಾನಿಸ್ತಾನ ವಿರುದ್ಧ ಆರಂಭವಾಗಿರುವ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.

ಮೊಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಆಫ್ಗಾನ್ ನೀಡಿದ 159 ರನ್ ಗುರಿ ಬೆನ್ನತ್ತಿದ ಭಾರತ ನಾಯಕ ರೋಹಿತ್ ಶರ್ಮಾ(0) ದುರದೃಷ್ಟವಶಾತ್ ರನೌಟ್ ಆಗುವ ಮೂಲಕ ಕೆಟ್ಟ ಆರಂಭವನ್ನು ಪಡೆಯಿತು. 

ನಂತರ ಬಂದ ಆರಂಭಿಕರಾದ ಶುಭಮನ್ ಗಿಲ್ (23) ಮತ್ತು ತಿಲಕ್ ವರ್ಮಾ (26) ಸಹ ಕಡಿಮೆ ರನ್ ಗೆ ಔಟಾದರು. ಇನ್ನು ಜಿತೇಶ್ ಶರ್ಮಾ 31 ರನ್ ಗೆ ಔಟಾದರು. ಆದರೆ ಶಿವಂ ದುಬೆ ಅಜೇಯ 60 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ರಿಂಕು ಸಿಂಗ್ ಅಜೇಯ 16 ರನ್ ಗಳಿಸಿದ್ದಾರೆ. ಅಂತಿಮವಾಗಿ ಭಾರತ 17.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.

ಅಫ್ಘಾನಿಸ್ತಾನದ ಪರ ವಿಕೆಟ್ ಕೀಪರ್ ಗುರ್ಬಾಜ್ (23) ಮತ್ತು ಇಬ್ರಾಹಿಂ ಜದ್ರಾನ್ (23) ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಜ್ಮತುಲ್ಲಾ (29) ಕೂಡ ಉತ್ತಮ ಕೊಡುಗೆ ನೀಡಿದರು. ಆದರೆ ರಹಮತ್ ಕೇವಲ ಮೂರು ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಒಂದು ತುದಿಯಲ್ಲಿ ಮಾಜಿ ನಾಯಕ ಮೊಹಮ್ಮದ್ ನಬಿ (42) ಉತ್ತಮ ಕೈಚಳಕ ತೋರಿದರೆ, ನಜೀಬುಲ್ಲಾ ಅಜೇಯ 19 ರನ್ ಉಪಯುಕ್ತ ಕೊಡುಗೆ ನೀಡಿದರೆ, ಅಫ್ಘಾನಿಸ್ತಾನ ತಂಡ 5 ವಿಕೆಟ್ ಕಳೆದುಕೊಂಡು 158 ರನ್ ತಲುಪುವಲ್ಲಿ ಯಶಸ್ವಿಯಾಯಿತು. 

ಭಾರತದ ಪರ ಅಕ್ಷರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲಿ ತಮ್ಮ ಪ್ರತಿಭೆ ತೋರಿದ ಶಿವಂ ದುಬೆ ಕೂಡ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com