ಮೊದಲ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ, ಆಂಗ್ಲರ ವಿರುದ್ಧ ಟೀಂ ಇಂಡಿಯಾ ಮಾರಕ ಬೌಲಿಂಗ್, 5 ವಿಕೆಟ್ ಪತನ

ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ನಿಂದಾಗಿ 5 ವಿಕೆಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ವಿರುದ್ಧ ಭಾರತದ ಮಾರಕ ಬೌಲಿಂಗ್
ಇಂಗ್ಲೆಂಡ್ ವಿರುದ್ಧ ಭಾರತದ ಮಾರಕ ಬೌಲಿಂಗ್

ಹೈದರಾಬಾದ್: ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ನಿಂದಾಗಿ 5 ವಿಕೆಟ್ ಕಳೆದುಕೊಂಡಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭವಾಗ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್ ಗೆ ಇಂಗ್ಲೆಂಡ್ ನ ಆರಂಭಿಕರಾದ ಝ್ಯಾಕ್ ಕ್ರಾಲಿ (20 ರನ್) ಮತ್ತು ಬೆನ್ ಡಕೆಟ್ (35 ರನ್) 55ರನ್ ಜೊತೆಯಾಟವಾಡಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು.

ಈ ಹಂತದಲ್ಲಿ ದಾಳಿಗಿಳಿದ ಆರ್ ಅಶ್ವಿನ್ ಅವರು ಇಂಗ್ಲೆಂಡ್ ತಂಡದ ಕ್ರಾಲಿ ಅವರನ್ನು ಔಟ್ ಮಾಡುವ ಮೂಲಕ ಭಾರತ ತಂಡಕ್ಕೆ ಮೊದಲ ಮುನ್ನಡೆ ತಂದಿತ್ತರು. ಇವರ ಹಿಂದೆಯೇ ಬೆನ್ ಡಕೆಟ್ ಕೂಡ ಅದೇ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಔಟಾದರು.

ಬಳಿಕ ಮಧ್ಯಮ ಕ್ರಮಾಂಕದ ಒಲ್ಲಿಪೋಪ್ (1ರನ್) ಮತ್ತು ಅಪಾಯಕಾರಿ ಜೋ ರೂಟ್ (29 ರನ್) ರನ್ನುರವೀಂದ್ರಜಡೇಜಾ ಔಟ್ ಮಾಡುವ ಮೂಲಕ ಮತ್ತೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಜೂ ರೂಟ್ ಗೆ ಉತ್ತಮ ಸಾಥ್ ನೀಡಿ ಆಡುತ್ತಿದ್ದ ಜಾನಿ ಬೇರ್ ಸ್ಟೋರನ್ನು ಭಾರತದ ಮತ್ತೋರ್ವ ಸ್ಪಿನ್ನರ್ ಅಕ್ಸರ್ ಪಟೇಲ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ ಮತ್ತೊಂದು ಆಘಾತ ನೀಡಿದರು.

ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 36.2 ಓವರ್ ನಲ್ಲಿ 128 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com