
ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ, ಐಸಿಸಿ ಪುರುಷರ ಟಿ-20 ಅಲ್ ರೌಂಡರ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ ಪಾಂಡ್ಯ 222 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತದ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.
ಆಡಿದ 8 ಪಂದ್ಯಗಳಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ ಅರ್ಧಶತಕ ಸೇರಿದಂತೆ 150 ಸ್ಟ್ರೈಕ್ ರೇಟ್ ನಲ್ಲಿ ಅವರು 144 ರನ್ ಗಳಿಸಿದ ಪಾಂಡ್ಯ, 11 ವಿಕೆಟ್ ಪಡೆದುಕೊಂಡಿದ್ದರು. ವಿಶೇಷವಾಗಿ ಸೋಲುವ ಹಂತದಲ್ಲಿ ಫೈನಲ್ ಪಂದ್ಯದಲ್ಲಿ ಅಪಾಯಕಾರಿ ಕ್ಲಾಸೆನ್ ಹಾಗೂ ಮಿಲ್ಲರ್ ಅವರ ವಿಕೆಟ್ ಪಡೆದು ಭಾರತ ತಂಡ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
ಇನ್ನೊಂದೆಡೆ ಜಸ್ಪ್ರೀತ್ ಬೂಮ್ರಾ 12 ನೇ ಸ್ಥಾನದಲ್ಲಿದ್ದರೆ, ಅಕ್ಷರ್ ಪಟೇಲ್ 7ನೇ ಸ್ಥಾನ ಕುಲದೀಪ್ ಯಾದವ್ 8 ಹಾಗೂ ಅರ್ಷದೀಪ್ ಸಿಂಗ್ 13 ಶ್ರೇಯಾಂಕದಲ್ಲಿದ್ದಾರೆ
Advertisement