
ಹರಾರೆ: ಹರಾರೆ ಸ್ಟೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ನಡೆದ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ವಿಶ್ವ ಟಿ-20 ಚಾಂಪಿಯನ್ ಭಾರತಕ್ಕೆ ಜಿಂಬಾಬ್ವೆ ಶಾಕ್ ನೀಡಿದೆ. 13 ರನ್ ಗಳಿಂದ ಪಂದ್ಯ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಜಿಂಬಾಬ್ವೆ ಪರ ಆರಂಭಿಕ ಆಟಗಾರರಾದ ಮಾಧೇವೆರೆ 21, ಬ್ರಿಯಾನ್ ಬೆನೆಟ್ 22, ನಾಯಕ ರಾಜಾ 17, ಡಿಯಾನ್ ಮೈಯರ್ಸ್ 23, ವಿಕೆಟ್ ಕೀಪರ್ ಕ್ಲೈವ್ ಮದಂಡೆ 29 ರನ್ ಗಳಿಸಿದರು. ಭಾರತದ ಪರ ರವಿ ಬಿಷ್ಟೋಯ್ 4 , ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.
ಜಿಂಬಾಬ್ವೆ ನೀಡಿದ 116 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದರು. ನಾಯಕ ಶುಭ್ ಮನ್ ಗಿಲ್ 31 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ಋತುರಾಜ್ ಗಾಯಕ್ವಾಡ್, 7, ರಿಯಾನ್ ಪರಾಗ್ 2 ರನ್ ಗಳಿಗೆ ಔಟಾದರೆ, ರಿಂಕ್ ಸಿಂಗ್ ಶೂನ್ಯಕ್ಕೆ ಫೆವಿಲಿಯನ್ ಸೇರಿದರು. ವಿಕೆಟ್ ಕೀಪರ್ ಧ್ರುವ್ ಜುರೆಲ್ 6, ವಾಷಿಂಗ್ಟನ್ ಸುಂದರ್ 27, ರವಿ ಬಿಷ್ಣೋಯ್ 9, ಅವೇಶ್ ಖಾನ್ 16 ರನ್ ಗಳಿಸುವುದರೊಂದಿಗೆ 19.5 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಜಿಂಬಾಬ್ವೆ 13 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
Advertisement