ಯುವಿ ಕಿರೀಟಕ್ಕೆ ಮತ್ತೊಂದು ಗರಿ: ಫೈನಲ್ ನಲ್ಲಿ ಪಾಕ್ ವಿರುದ್ಧ ಭರ್ಜರಿ ಜಯ; ಭಾರತ ಚೊಚ್ಚಲ World Championship of Legends 2024 ಚಾಂಪಿಯನ್!

World Championship of Legends 2024 ಇದು ಕ್ರಿಕೆಟ್​ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದ್ದು, ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್​ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್​ ಟೂರ್ನಿಯನ್ನು ನೆನಪಿಸಿದೆ.
India Lifts World Championship of Legends 2024 Cup
ಭಾರತಕ್ಕೆ ಪಾಕ್ ವಿರುದ್ಧ ಭರ್ಜರಿ ಜಯ
Updated on

ಬರ್ಮಿಂಗ್​ಹ್ಯಾಮ್​: ಭಾರತ ಹಿರಿಯರ ತಂಡ World Championship of Legends 2024 ಉದ್ಘಾಟನಾ ಟೂರ್ನಿಯ ಫೈನಲ್ ನಲ್ಲಿ ಪಾಕಿಸ್ತಾನ ಹಿರಿಯರ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಹೌದು.. ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಭಾರತ ತಂಡ ಟಿ20 ವಿಶ್ವಕಪ್ ಜಯಿಸಿತ್ತು.

ಇದೀಗ ಭಾರತ ಹಿರಿಯರ ತಂಡ ಕೂಡ ಇದೇ ರೀತಿಯ ಸಾಧನೆ ಮಾಡಿದ್ದು, World Championship of Legends 2024 ಉದ್ಘಾಟನಾ ಟೂರ್ನಿಯ ಫೈನಲ್ ನಲ್ಲಿ ಪಾಕಿಸ್ತಾನ ಹಿರಿಯರ ತಂಡವನ್ನು 5 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದೆ.

India Lifts World Championship of Legends 2024 Cup
ಗಿಲ್, ಜೈಸ್ವಾಲ್ ಸ್ಫೋಟಕ ಅರ್ಧ ಶತಕ: ಜಿಂಬಾಬ್ವೆ ವಿರುದ್ಧ 4ನೇ ಪಂದ್ಯದಲ್ಲಿ 10 ವಿಕೆಟ್‌ ಜಯ; T20 ಸರಣಿ ಭಾರತ ಕೈವಶ

World Championship of Legends 2024 ಇದು ಕ್ರಿಕೆಟ್​ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದ್ದು, ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್​ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್​ ಟೂರ್ನಿಯನ್ನು ನೆನಪಿಸಿದೆ. ಟಿ20 ವಿಶ್ವ ಕಪ್​ನ ಮೊದಲ ಆವೃತ್ತಿಯಲ್ಲೇ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.

ಅಲ್ಲೂ ಪಾಕಿಸ್ತಾನವನ್ನೇ ಕೊನೇ ಎಸೆತದಲ್ಲಿ ನಾಟಕೀಯ ಫಲಿತಾಂಶದ ಮೂಲಕ ಸೋಲಿಸಿತ್ತು. ಇಲ್ಲಿಯೂ ಕೊನೆ ಹಂತದವರೆಗೂ ಸಾಗಿದ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿಗೆ ಭಾಜನವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಲೆಜೆಂಡ್ಸ್ ತಂಡ 6 ವಿಕೆಟ್ ಗೆ 156 ರನ್ ಗಳಿಸಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 19.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 5ವಿಕೆಟ್ ಅಂತರದಲ್ಲಿ ಜಯಗಳಿಸಿತು.

ಭಾರತ ಪರ ಬ್ಯಾಟಿಂಗ್​ನಲ್ಲಿ ಅಂಬಾಟಿ ರಾಯುಡು (50) ಅರ್ಧ ಶತಕ ಬಾರಿಸಿ ಮಿಂಚಿದರೆ ಯೂಸುಫ್ ಪಠಾಣ್​ 16 ಎಸೆತಕ್ಕೆ 30 ರನ್ ಬಾರಿಸಿ ಮಿಂಚಿದರು. ಯುವರಾಜ್ ಸಿಂಗ್​ 15 ರನ್ ಬಾರಿಸಿದರೆ ಇರ್ಫಾಣ್ ಪಠಾಣ್ 5 ರನ್ ಬಾರಿಸಿದರು. ಬೌಲಿಂಗ್​ನಲ್ಲಿ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದರು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭನ್ನು ಪಡೆಯಿತು. ಮೊದಲ ವಿಕೆಟ್​ಗೆ 34 ರನ್​ ಬಾರಿಸಿತು. ಪ್ರಮುಖವಾಗಿ ಅಂಬಾಟಿ ರಾಯುಡು 30 ಎಸೆತಕ್ಕೆ 50 ರನ್ ಬಾರಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 10 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಬಳಿಕ ಸುರೇಶ್ ರೈನಾ ಕೂಡ 4 ರನ್​ಗೆ ವಿಕೆಟ್​ ಒಪ್ಪಿಸಿ ಆತಂಕ ತಂದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಗುರುಕೀರತ್​ ಸಿಂಗ್ ಮಾನ್​ 33 ಎಸೆತಕ್ಕೆ 34 ರನ್ ಬಾರಿಸಿ ಆಧಾರವಾದರು. ಕೊನೆ ಹಂತದಲ್ಲಿ ಯೂಸುಫ್ ಪಠಾಣ್​ ಭರ್ಜರಿಯಾಗಿ ಬ್ಯಾಟ್ ಬೀಸಿ 30 ರನ್ ಬಾರಿಸಿ ಗೆಲುವು ತಂದುಕೊಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com