
ನವದೆಹಲಿ: ವಿಕ್ಕಿ ಕೌಶಲ್ ಅವರ ವೈರಲ್ 'ತೌಬಾ-ತೌಬಾ' ಹಾಡಿಗೆ ಹೆಜ್ಜೆ ಹಾಕುವ ಪ್ರಯತ್ನದಲ್ಲಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ದಿವ್ಯಾಂಗರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ದಿವ್ಯಾಂಗರ ಹಕ್ಕುಗಳ ಪರ ಹೋರಾಟದ ಗುಂಪುಗಳು ಟೀಕಿಸಿವೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್‌ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಮಾಜಿ ಕ್ರಿಕೆಟಿಗರು ಇನ್ಸ್ಟ್ರಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ವೀಡಿಯೊದಲ್ಲಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ರೈನಾ ಕುಂಟುತಾ ಸಾಗುವುದನ್ನು ನೋಡಬಹುದು.
'15 ದಿನಗಳ ಲೆಜೆಂಡ್ ಕ್ರಿಕೆಟ್ ನಲ್ಲಿ ದೇಹಕ್ಕೆ ಸಾಕಷ್ಟು ನೋವಾಗಿದೆ. ದೇಹದ ಪ್ರತಿಯೊಂದು ಭಾಗವೂ ನೋಯುತ್ತಿದೆ. ನಮ್ಮ ತೌಬಾ ತೌಬಾ ನೃತ್ಯದ ಆವೃತ್ತಿ ಸಹೋದರರಾದ @vickykaushal09 @karanaujla ಅವರಿಗೆ ನೇರ ಸ್ಪರ್ಧೆ. ವಾಟ್ ಎ ಸಾಂಗ್ ಎಂದು ವಿಡಿಯೋಕ್ಕೆ ಅಡಿಬರಹ ನೀಡಲಾಗಿದೆ. ಈ ವಿಡಿಯೋ ಕೆಟ್ಟ ಅಭಿರುಚಿ ಹೊಂದಿದೆ ಎಂದು ದಿವ್ಯಾಂಗ ಪರ ಹೋರಾಟಗಾರರು ಆರೋಪಿಸಿದ್ದಾರೆ. ಈ ವಿಡಿಯೋ ಸಂಪರ್ಣವಾಗಿ ಅವಮಾನಕಾರವಾಗಿದೆ ಎಂದು ದಿವ್ಯಾಂಗರ ಹಕ್ಕುಗಳಿಗಾಗಿ ಇರುವ ರಾಷ್ಟ್ರೀಯ ವೇದಿಕೆ ಹೇಳಿದೆ.
ಬಿಸಿಸಿಐ ಈ ವಿಡಿಯೋವನ್ನು ಪರಿಗಣಿಸಬೇಕು, ಭಾರತದ ಅಗ್ರ ಕ್ರಿಕೆಟಿಗರು ದಿವ್ಯಾಂಗರ ಅಪಹಾಸ್ಯ ನೋಡಲು ಅಸಹ್ಯಕರವಾಗಿದೆ. ಜನಸಾಮಾನ್ಯರಿಂದ ಆರಾಧಿಸಲ್ಪಟ್ಟವರಿಂದ ನಾಚಿಕೆಗೇಡಿನ ಮತ್ತು ಕ್ರೂರ ವರ್ತನೆಯಾಗಿದೆ. ಬಿಸಿಸಿಐ ತಕ್ಷಣ ಇದರ ಬಗ್ಗೆ ಗಮನ ಹರಿಸಬೇಕು ಎಂದು ದಿವ್ಯಾಂಗರಿಗೆ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಒತ್ತಾಯಿಸಿದ್ದಾರೆ.
Advertisement