
ನವದೆಹಲಿ: ಅಮೇರಿಕಾದಲ್ಲಿ ವಿಶ್ವಕಪ್ ಟೂರ್ನಿ 2024 ನ್ನು ಆಯೋಜಿಸಿದ್ದ ಐಸಿಸಿ ಗೆ 167 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ಪ್ರಕಟವಾಗಿದೆ.
ಪಿಟಿಐ ವರದಿಯ ಪ್ರಕಾರ, ಕೊಲಂಬೋದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಐಸಿಸಿ ವಾರ್ಷಿಕ ಕಾನ್ಫರೆನ್ಸ್ ನಲ್ಲಿ ಇದು ಚರ್ಚೆಯ ಪ್ರಮುಖ ವಿಷಯವಾಗಿರಲಿದೆ ಎಂದು ತಿಳಿದುಬಂದಿದೆ.
ಎಜಿಎಂ ನ 9 ಅಂಶಗಳಲ್ಲಿ ಈ ವಿಷಯ ಇಲ್ಲವಾದರೂ, ಪೋಸ್ಟ್ ಇವೆಂಟ್ ರಿಪೋರ್ಟ್ ಆಗಿ ಚರ್ಚೆಗೆ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಸೇರಿದಂತೆ ಪಂದ್ಯಾವಳಿಯ ಪ್ರಮುಖ ಭಾಗವನ್ನು USA ನಲ್ಲಿ ಆಯೋಜಿಸಲಾಗಿತ್ತು.
ICC ಅಧ್ಯಕ್ಷರ ಹುದ್ದೆಗೆ BCCI ನ ಕಾರ್ಯದರ್ಶಿ ಜಯ್ ಶಾ ನೇಮಕಗೊಳ್ಳುವುದರ ಬಗ್ಗೆಯೂ AGM ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರ ಅವಧಿ ಇನ್ನೂ ಒಂದು ವರ್ಷ ಇದೆ. 2025 ರಲ್ಲಿ ಐಸಿಸಿ ಹುದ್ದೆಗೆ ಜಯ್ ಶಾ ನೇಮಕಗೊಂಡರೆ, ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು 2024 ರಿಂದ 2026 ವರೆಗಿನ ತಮ್ಮ 3 ನೇ ಅವಧಿಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಐಸಿಸಿ ಮೂಲಗಳು ತಿಳಿಸಿವೆ.
"ಐಸಿಸಿಯ ಅಧ್ಯಕ್ಷ ಸ್ಥಾನದ ಅವಧಿಯು ತಲಾ ಎರಡು ವರ್ಷಗಳ ಮೂರು ಅವಧಿಯಿಂದ ಮೂರು ವರ್ಷಗಳ ಎರಡು ಅವಧಿಗೆ ಬದಲಾದರೆ, ಒಟ್ಟು ಅವಧಿಯು ಆರು ವರ್ಷಗಳವರೆಗೆ ಉಳಿಯಬಹುದು ಎಂಬ ಚಿಂತನೆಯೂ ನಡೆಯುತ್ತಿದೆ.
3 ವರ್ಷಗಳ ಕಾಲ ಬಾರ್ಕ್ಲೇ ತಮ್ಮ 3 ನೇ ಅವಧಿಯನ್ನು ಪೂರ್ಣಗೊಳಿಸಿದರೆ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಬಹುದು ಮತ್ತು 2025 ರಲ್ಲಿ ಮೂರು ವರ್ಷಗಳವರೆಗೆ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದೆಂಬುದು ಎಂಬುದು ಹೊಸ ಚಿಂತನೆಯ ಉದ್ದೇಶವಾಗಿದೆ.
Advertisement