
ಡಂಬುಲಾ: ಮಹಿಳಾ ಟಿ20 ಏಷ್ಯಾಕಪ್ 2024 ಟೂರ್ನಿಯ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಶ್ರೀಲಂಕಾ ವನಿತೆಯರ ತಂಡ ವಿರೋಚಿತ ಜಯ ದಾಖಲಿಸಿದ್ದು, ಟೂರ್ನಿಯ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.
ಶ್ರೀಲಂಕಾದ ಡಂಬುಲಾದ ರಣ್ಗಿರಿ ಡಂಬುಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 141 ರನ್ ಗಳ ಗುರಿಯನ್ನು 19.5 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 141ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು. ಅಲ್ಲದೆ ಈ ಗೆಲುವಿನ ಮೂಲಕ ಶ್ರೀಲಂಕಾ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ಶ್ರೀಲಂಕಾ ಪರ ಚಮರಿ ಅಟ್ಟಪಟ್ಟು 48 ಎಸೆತಗಳಲ್ಲಿ 63 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅವರಿಗೆ ಅನುಷ್ಕಾ ಸಂಜೀವನಿ (ಅಜೇಯ 24) ಸಾಥ್ ನೀಡಿದರು. ಒಂದು ಹಂತದಲ್ಲಿ ಪಾಕಿಸ್ತಾನ ಪರ ವಾಲಿದ್ದ ಪಂದ್ಯವನ್ನು ಅನುಷ್ಕಾ ಮತ್ತು ಸುಗಂತಿಕಾ ಕುಮಾರಿ ತಂಡಕ್ಕೆ ಗೆಲುವಿನ ರನ್ ಗಳಿಸಿದರು. ಪಾಕಿಸ್ತಾನ ಪರ ಸಾದಿಯಾ ಇಕ್ಬಾಲ್ 4 ವಿಕೆಟ್ ಕಬಳಿಸಿದರೆ, ನಾಯಕಿ ನಿಡಾದಾರ್ ಮತ್ತು ಒಮೈಮಾ ಸೊಹೈಲ್ ತಲಾ 1 ವಿಕೆಟ್ ಪಡೆದರು.
ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಚಮರಿ ಅಟ್ಟಪಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement