
ನವದೆಹಲಿ: ಭಾರತದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಸತತ ಎರಡನೇ ಬಾರಿಗೆ ಡಕ್ ಔಟಾಗಿದ್ದಾರೆ.
ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸ್ಯಾಮ್ಸನ್ ಪಂದ್ಯದ ಮೂರನೇ ಓವರ್‌ನಲ್ಲಿ ಚಾಮಿಂದು ವಿಕ್ರಮಸಿಂಘೆ ಎಸೆತದಲ್ಲಿ ಔಟ್ ಆದರು. ಇದಕ್ಕೂ ಮೊದಲು ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಸ್ಯಾಮ್ಸನ್ ಮಹೇಶ್ ತೇಕ್ಷಣ ಅವರ ಎಸೆತದಲ್ಲಿ ಗೋಲ್ಡನ್ ಡಕೌಟ್ ಆಗಿದ್ದರು.
ಐಸಿಸಿ ಟೂರ್ನಿಯಲ್ಲಿ ಆಡಲು ಒಂದೇ ಒಂದು ಅವಕಾಶ ಸಿಕ್ಕಿಲ್ಲ ಎಂದು ಸ್ಯಾಮ್ಸನ್ ಪರ ಕೂಗು ಎದ್ದಿತ್ತು. ಇನ್ನು ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿದ್ದರು. ನ್ಯೂಯಾರ್ಕ್ನ ಕಠಿಣ ಪಿಚ್ನಲ್ಲಿ 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಹೀಗಾಗಿ ಸ್ಯಾಮ್ಸನ್ ಸಂಪೂರ್ಣ T20 ವಿಶ್ವಕಪ್‌ಗೆ ಬೆಂಚ್ ಕಾದಿದ್ದರು.
ಐಸಿಸಿ ಪಂದ್ಯಾವಳಿಯ ನಂತರ ತಕ್ಷಣವೇ ನಡೆದ ಜಿಂಬಾಬ್ವೆ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದರು. ಆ ಸರಣಿಯಲ್ಲಿ ಸ್ಯಾಮ್ಸನ್ ಅರ್ಧಶತಕ ಗಳಿಸಿದರು. ನಂತರ ಗೌತಮ್ ಗಂಭೀರ್ ನೇತೃತ್ವದಲ್ಲಿ T20 ತಂಡಕ್ಕೂ ಆಯ್ಕೆಯಾದರು. 3 ಪಂದ್ಯಗಳ ಸರಣಿಯಲ್ಲಿ ಪ್ರಭಾವ ಬೀರಲು ಬಯಸುತ್ತಿದ್ದ ಸ್ಯಾಮ್ಸನ್, ಸರಣಿಯ 2ನೇ ಮತ್ತು 3ನೇ T20I ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸ್ಯಾಮ್ಸನ್ ಏಕದಿನ ತಂಡಕ್ಕೆ ಆಯ್ಕೆಯಾಗಿಲ್ಲ.
Advertisement